ಬೆಂಗಳೂರು: ಫುಟ್ ಪಾತ್‌ನಲ್ಲಿ ಕಸ ತುಂಬಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಬಿಎಂಟಿಸಿ ಬಸ್ಸೊಂದು ಗುದ್ದಿದ ಪರಿಣಾಮ ಬಸ್ ಸಂಪೂರ್ಣ ಜಖಂ ಆಗಿರುವ ಘಟನೆ ಸದಾಶಿವನಗರದ ಕಾವೇರಿ ಜಂಕ್ಷನ್‌ನಲ್ಲಿ ನಡೆದಿದೆ.

ಮುಂಜಾನೆ ದಟ್ಟವಾದ ಮಂಜು ಕವಿದ ಹಿನ್ನೆಲೆ, ಯಲಹಂಕ ನ್ಯೂಟೌನ್ ನಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದ ಬಿಎಂಟಿಸಿ ಬಸ್ ಗಮನಿಸಿದೆ ರಸ್ತೆ ಬದಿ ಕಸ ತುಂಬಿಕೊಳ್ಳುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೆ ಅಪಾಯವಾಗಿಲ್ಲ.
ಘಟನೆ ಬಳಿಕ ಕಂಡಾಕ್ಟರ್ ಹಾಗೂ ಚಾಲಕ ಇಬ್ಬರೂ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಘಟನ ಸ್ಥಳಕ್ಕೆ ಸದಾಶಿವನಗರ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಸ್ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಮಹಿಳಾ ಕಾರ್ಮಿಕರು ಬಲಿ!



















