ಬೆಳಗಾವಿ : ಕಾಂಗ್ರೆಸ್ ಸರ್ಕಾರಕ್ಕೆ ಎಷ್ಟೇ ತಿಳಿವಳಿಕೆ ಹೇಳಿದ್ರೂ ಕೇಳಲ್ಲ, ಈಗ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ, ಕಾಂಗ್ರೇಸ್ ಸರ್ಕಾರ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಬಹುತೇಕ ಕಡೆಗಳಲ್ಲಿ ಜನೌಷಧ ಕೇಂದ್ರಗಳಿವೆ. ಕಡಿಮೆ ದರಗಳಲ್ಲಿ ಜನರಿಗೆ ಔಷಧಗಳ ಮಾರಾಟವಾಗುತ್ತಿದೆ. ಆದ್ರೆ ಸರ್ಕಾರಕ್ಕೆ ಇದು ಸರಿ ಬರ್ತಿಲ್ಲ ಅನ್ಸತ್ತೆ ಜನೌಷಧ ಮುಚ್ಚುವ ಪ್ರಯತ್ನದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗೆ ಎಷ್ಟೇ ತಿಳಿವಳಿಕೆ ಹೇಳಿದ್ರೂ ಕೇಳಲ್ಲ, ಈಗ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಒಳ್ಳೆಯ ತೀರ್ಮಾನ ಕೋರ್ಟ್ ನಿಂದ ಬಂದಿದೆ. ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಹಿಂದೂಗಳ ಬಲದಿಂದಲೇ ತಿರುಪರಂಕುಂಡ್ರಂ ದೀಪ ವಿವಾದ ಇತ್ಯರ್ಥ ಸಾಧ್ಯ ; ಮೋಹನ್ ಭಾಗವತ್ ವಿಶ್ವಾಸ



















