ಫೈನಲಿ, ಕೋಟ್ಯಂತರ ಅಭಿಮಾನಿಗಳ ಕಾತರ ಕೊನೆಗೊಂಡಿದೆ. ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಇಂದು ಬಿಡುಗಡೆ ಆಗಿದೆ. ಮುಂಜಾನೆ 6:30ರ ಮಾರ್ನಿಂಗ್ ಶೋನೊಂದಿಗೆ ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ.
ನಿರ್ದೇಶಕ-ನಿರ್ಮಾಪಕ ಪ್ರಕಾಶ್ ವೀರ್ ಸಾರಥ್ಯದ ಸಿನಿಮಾ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣ ವೇದಿಕೆಯಾದ ಎಕ್ಸ್ನಲ್ಲಿ ವೀಕ್ಷಕರು ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ”ದಿ ಡೆವಿಲ್, ಬ್ಲಾಕ್ಬಸ್ಟರ್” ಅನ್ನೋ ಟ್ವೀಟ್ ಹೇರಳವಾಗಿವೆ.
ಚಿತ್ರಮಂದಿರಗಳಲ್ಲಿ ಇದ್ರೆ ನೆಮ್ದಿಯಾಗಿರ್ಬೇಕ್ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಮೆಚ್ಚಿನ ನಟನ ಮೇಲೆ ಪ್ರೀತಿಯ ಧಾರೆಯೆರೆದಿರುವ ವಿಡಿಯೋ ಹಂಚಿಕೊಂಡ ಅಭಿಮಾನಿಯೋರ್ವರು, ”ಏನೇ ಆಗೋಗ್ಲಿ, ನಿಮ್ಮನ್ನು ಬಿಡೋರ್ ನಾವಲ್ಲ, ದಿ ಡೆವಿಲ್” ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿ, ”ಬ್ಲಾಕ್ಬಸ್ಟರ್, ಪ್ಯೂರ್ ಫ್ಯಾಮಿಲಿ ಪ್ಯಾಕೇಜ್ ಎಂಟರ್ಟೈನರ್, ಪಕ್ಕಾ ಪೈಸಾ ವಸೂಲ್” ಎಂದು ಬರೆದುಕೊಂಡಿದ್ದಾರೆ. ಇವರದ್ದೇ ಮತ್ತೊಂದು ಟ್ವೀಟ್ನಲ್ಲಿ, ”ಡಿ ಬಾಸ್ ಕ್ಯಾರಕ್ಟರೈಸೇಶನ್ ಅಂಡ್ ಆ್ಯಕ್ಟಿಂಗ್ ಸೂಪರ್, ಸ್ಕ್ರೀನ್ ಪ್ರೆಸೆನ್ಸ್ – ಬಡಿದು ತಿಂದ್ಕೊಂಡವರೆ” ಎಂದು ತಿಳಿಸಲಾಗಿದೆ.
ಫೈನಲಿ, ನಾವು ಗೆದ್ವಿ. ಬ್ಲಾಕ್ಬಸ್ಟರ್ :
ದರ್ಶನ್ ಲುಕ್ ಮತ್ತು ಬಿಜಿಎಂ ಅನ್ನು ಹಾಡಿ ಹೊಗಳಿರುವ ಅಭಿಮಾನಿಯೋರ್ವರು, ”ಫೈನಲಿ, ನಾವು ಗೆದ್ವಿ. ಬ್ಲಾಕ್ಬಸ್ಟರ್. ದಿ ಡೆವಿಲ್ ಫೈಯರ್ (ಫೈಯರ್ ಎಮೋಜಿಯೊಂದಿಗೆ), ಬಿಜಿಎಂ ಫೈಯರ್, ಬಾಸ್ ಲುಕ್ ಫೈಯರ್, ಆಲ್ ಓವರ್ ಮೂವಿ ಸೈಕ್” ಎಂದು ಬರೆದುಕೊಂಡಿದ್ದಾರೆ.
ಪ್ರಕಾಶ್ ವೀರ್ಗೆ ಪ್ರಶಂಸೆಗಳ ಮಳೆ
ಡೈರೆಕ್ಟರ್ ಪ್ರಕಾಶ್ ವೀರ್ ಅವರ ನಿರ್ದೇಶನಾ ಶೈಲಿಗೂ ಪ್ರಶಂಸೆಯ ಮಳೆ ಹರಿದಿದೆ. ಟ್ವೀಟ್ ಒಂದರಲ್ಲಿ, ”ಅತ್ಯುತ್ತಮ ಸ್ಕ್ರಿಪ್ಟ್‌ಗಾಗಿ ಧನ್ಯವಾದಗಳು ಪ್ರಕಾಶ್ ಸರ್. ಇನ್ಮೇಲೆ ಮಿಲನ ಪ್ರಕಾಶ್ ಅಲ್ಲಾ, ಡೆವಿಲ್ ಪ್ರಕಾಶ್ ಅಂತಾ ಕರೆಯೋದು ಕನ್ಫರ್ಮ್. ಈ ಚಿತ್ರದಲ್ಲಿ ನಟ ದರ್ಶನ್ ನಟನೆ ಉತ್ತುಂಗಕ್ಕೇರಿದೆ. ಈ ಡೆವಿಲ್ ಕ್ಯಾರೆಕ್ಟರ್ ಮತ್ತು ಸಿನಿಮಾ ಬಹಳ ಕಾಲ ನೆನಪಿನಲ್ಲಿ ಉಳಿಯಲಿದೆ” ಎಂದು ತಿಳಿಸಿದ್ದಾರೆ.
ಪಾಸಿಟಿವ್ ರಿಯಾಕ್ಷನ್ ಒಂದರಲ್ಲಿ, ”ದಿ ಡೆವಿಲ್, ಡಿ ಬಾಸ್ ಕಮರ್ಶಿಯಲ್ ಹಿಟ್ ಕೊಟ್ಟಿದ್ದಾರೆ. ಮಾಸ್, ಎಮೋಷನ್, ಕಾಮಿಡಿ, ಟ್ವಿಸ್ಟ್ ಎಲ್ಲವೂ ಸಂಪೂರ್ಣವಾಗಿ ಬೆರೆತು ನನ್ನನ್ನು ಆವರಿಸಿಕೊಂಡಿದೆ. ಪ್ರಕಾಶ್ ವೀರ್ ಅವರ ದೃಷ್ಟಿಕೋನ ಮತ್ತು ತಂಡದ ಕಠಿಣ ಪರಿಶ್ರಮ ಪ್ರತಿ ಫ್ರೇಮ್‌ನಲ್ಲೂ ಕಾಣಿಸುತ್ತಿದೆ. ಅಭಿಮಾನಿಗಳ ಹೃದಯ ತುಂಬಿ ಬಂದಿದೆ! ಗೋ ವಾಚ್ ಗಾಯ್ಸ್, ಪೈಸಾ ವಸೂಲ್” ಎಂದು ಬರೆದುಕೊಂಡಿದ್ದಾರೆ.
ಅಪ್ಪಟ ಅಭಿಮಾನಿಯೊಬ್ಬರು ದರ್ಶನ್ ಪೋಸ್ಟರ್ಗೆ ಮುತ್ತಿಟ್ಟು ತಮ್ಮ ಅತೀವ ಖುಷಿ ಹಂಚಿಕೊಂಡಿದ್ದಾರೆ. ”ಕೊನೆಗೂ ಕರ್ನಾಟಕದಾದ್ಯಂತ ಬ್ಲಾಕ್ ಬಸ್ಟರ್ ವಿಮರ್ಶೆಗಳು. ಕೊನೆಗೂ ನಾವು ಗೆದ್ದೆವು” ಎಂದು ಬರೆದುಕೊಂಡಿದ್ದಾರೆ. ಹೀಗೆ ಸಿನಿಮಾ ಬಹುತೇಕ ಪಾಸಿಟಿವ್ ರಿವ್ಯೂ ಪಡೆದುಕೊಳ್ಳುತ್ತಿದೆ.
‘ದಿ ಡೆವಿಲ್’ ಚಿತ್ರತಂಡ ಹೀಗಿದೆ :
ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಡಿ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ದರ್ಶನ್ ಜೊತೆ ರಚನಾ ರೈ ಅಭಿನಯಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ಗಿಲ್ಲಿ ನಟ, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ್ ಪ್ರಭು, ಶೋಭ್ ರಾಜ್, ಹುಲಿ ಕಾರ್ತಿಕ್, ಸೋನಿಯಾ, ಯುವರಾಜ್ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ. ಸುಧಾಕರ್.ಎಸ್.ರಾಜ್ ಕ್ಯಾಮರಾ ಕೈಚಳಕ, ಬಿ.ಅಜನೀಶ್ ಲೋಕನಾಥ್ ಸಂಗೀತದ ಮೋಡಿ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ, ಕಾಂತರಾಜ್ ಡೈಲಾಗ್ಸ್ ಚಿತ್ರಕ್ಕಿದೆ.
ಇದನ್ನೂ ಓದಿ : ಬೆತ್ತಲೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಶಂಕೆ | MBA ವಿದ್ಯಾರ್ಥಿ ಆತ್ಮಹತ್ಯೆ



















