ಬೆಂಗಳೂರು ; ಭಕ್ತಿಯ ನಾದ, ಡೊಳ್ಳಿನ ಗರ್ಜನೆ ಮಾಯ್ಕಾರ ಮಹಿಮೆ.. ಸದ್ಯಕ್ಕೆ ಹೊಸ ಭಕ್ತಿ ಸಿಂಚನವನ್ನ ಪಸರಿಸೋದ್ರಲ್ಲಿ ‘ಉಘೇ ಉಘೇ ಮಾಯ್ಕಾರ’ ಹಾಡು ಗೆದ್ದಿದೆ. ಒಂದು ಭಕ್ತಿಪೂರ್ವಕ ಹಾಡು ಹೀಗೆ ಬರಬೇಕು ಎಂಬ ಭಕ್ತಿಸುಧೆಯಲ್ಲೇ ಈ ಹಾಡು ತಯಾರಾದಂತಿದೆ.
ಕನ್ನಡ ಚಿತ್ರರಂಗದಲ್ಲಿ ಪ್ರಚಾರ ಹಾಗೂ ಇವೆಂಟ್ ಪ್ಲ್ಯಾನ್ ಅಂತ ಬ್ಯುಸಿಯಾಗಿದ್ದ ವಿನೋದ್ ಕುಮಾರ್ ಇಲ್ಲಿ ಹೊಸ ಅವತಾರದೊಂದಿಗೆ ಹಾಜರಾಗಿದ್ದಾರೆ. ವಾಲಿಸ್ ಫ್ಲಿಕ್ಸ್ ಯೂಟ್ಯೂಬ್ ನಲ್ಲಿ ಹಾಡು ಲಭ್ಯವಿದೆ.

ಹಾಡಿನಲ್ಲಿ ವಿನೋದ್ ಜೊತೆ ಕಿಶನ್ ಬಿಳಗಲಿ ಹಾಗೂ ಮಹಾಲಿಂಗಮ್ ಕಾಣಿಸಿಕೊಳ್ತಾರೆ. ವಿನೋದ್ ಕುಮಾರ್ ಗೆಳಯ ವಾಲಿಸ್ ಸಂತೋಷ್ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಶ್ರೀವಲ್ಲಿ ಗುಂಡಾಲ ನಿರ್ಮಾಣಕ್ಕೆ ಪ್ರಭು ದಾಸ್ ಮ್ಯೂಸಿಕ್ ಮತ್ತು ಮಾರುತಿ ರಾವ್ ಕ್ಯಾಮೆರಾ ಕೆಲಸ ಕಲಾ ಶ್ರೀಮಂತಿಕೆಯ ಟಚ್ ಕೊಟ್ಟಿದೆ.

ಮಾದೇಶ್ವರನ ಆಶೀರ್ವಾದದಿಂದಲೇ ಇಂತಹ ಒಂದು ಪ್ರಯತ್ನ ನಮಗೆ ಸಾಧ್ಯವಾಯ್ತು ಎನ್ನುವ ನಟ ವಿನೋದ್ ಕುಮಾರ್ ಗೆ ದೊಡ್ಮನೆ ಕಿಂಗ್ ಡಾ.ಶಿವರಾಜ್ ಕುಮಾರ್ ಜೊತೆ ಒಮ್ಮೆಯಾದ್ರು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ತವಕವಿದೆಯಂತೆ. ಭಕ್ತಿಗೀತೆಗಳು ಕಡಿಮೆಯಾಗ್ತಿರೋ ಈ ಕಾಲಘಟ್ಟದಲ್ಲಿ ‘ಉಘೇ ಉಘೇ ಮಾಯ್ಕಾರ’ ಹಾಡು ಒಂದು ಫ್ರೆಶ್ ಡಿವೊಷನಲ್ ಬೀಟ್ ಕೊಟ್ಟಿರೋದಂತೂ ನಿಜಾನೇ.
ಇದನ್ನೂ ಓದಿ : ಕೇಂದ್ರ ಸರ್ಕಾರದ RVNL ಸಂಸ್ಥೆಯಲ್ಲಿ 6 ಹುದ್ದೆಗಳು ಖಾಲಿ – ಕರ್ನಾಟಕದ 2 ಜಿಲ್ಲೆಯಲ್ಲಿ ನೇಮಕಾತಿ!



















