ಕಲಬುರಗಿ : ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೋಗಿ ಕಂಬದಲ್ಲೇ ಯುವಕ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.
ಶ್ರೀಮಂತ್ ಸುಭಾನ್ (18) ಮೃತ ಯುವಕ. ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸಫರ್ಮರ್ ಬಂದ್ ಮಾಡಲಾಗಿತ್ತು. ಹಾಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸುಭಾನ್ ಕಂಬ ಹತ್ತಿದ್ದನು. ಈ ವೇಳೆ ಹೈವೋಲ್ಟೆಜ್ ವಿದ್ಯುತ್ ಶಾಕ್‌ನಿಂದ ಕಂಬದ ಮೇಲೆ ನೇತಾಡಿದ್ದಾನೆ.
ಸದ್ಯ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಇಂಡಿಗೋಗೆ ಮತ್ತೊಂದು ಸಂಕಷ್ಟ | CCI ತನಿಖೆ ಆರಂಭ ಸಾಧ್ಯತೆ



















