ಇನ್ಫಾಂಟಿನ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುಕಾಲದ ಆಸೆ ಈಗ ಈಡೇರಿದೆ.ಶಾಂತಿ ಪ್ರಶಸ್ತಿ ಪಡೆದು ಶಾಂತಿಯ ಅಧ್ಯಕ್ಷ ಎಂಬ ಪಟ್ಟಕ್ಕೇರಬೇಕೆಂದ ಟ್ರಂಪ್ ಬಯಕೆ ಈಗ ತೀರಿದೆ. ಆದ್ರೆ ಇದು ನೊಬೆಲ್ ಶಾಂತಿ ಪ್ರಶಸ್ತಿ ಅಲ್ಲ ಕಣ್ರೀ… ಬದಲಾಗಿ ಇದು ಫಿಫಾ ಶಾಂತಿ ಪ್ರಶಸ್ತಿ. ಹೌದು.. ಗಾಜಾದಲ್ಲಿ ಕದನ ವಿರಾಮಕ್ಕೆ ಶ್ಲಾಘಿಸಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಈ ಪ್ರಶಸ್ತಿ ನೀಡಿದ್ದಾರೆ. ಟ್ರಂಪ್ ಅವರು ನೊಬೆಲ್ ಪ್ರಶಸ್ತಿಗೂ ಅರ್ಹರಾಗಿದ್ದರು ಎಂದು ಇನ್ಫಾಂಟಿನೊ ಹೇಳಿದ್ದಾರೆ. ಇದು ಫಿಫಾ ನೀಡಿದ ಮೊದಲ ಶಾಂತಿ ಪ್ರಶಸ್ತಿಯಾಗಿದೆ.
ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದ್ದರಿಂದ ಭಾರೀ ನಿರಾಸೆಗೊಳಗಾಗಿದ್ದ ಡೊನಾಲ್ಡ್ ಟ್ರಂಪ್‌ಗೆ ಇದೀಗ ಫಿಫಾದ ಹೊಸದಾಗಿ ರಚಿಸಲಾದ ಶಾಂತಿ ಪ್ರಶಸ್ತಿಯನ್ನ ನೀಡಲಾಗಿದೆ… ಈ ಪ್ರಶಸ್ತಿ ಜನರನ್ನು ಒಗ್ಗೂಡಿಸುವ ಮತ್ತು ಭವಿಷ್ಯದ ಪೀಳಿಗೆಗೆ ಭರವಸೆ ತರುವ ವ್ಯಕ್ತಿಗಳನ್ನು ಗುರುತಿಸಲು ಸೃಷ್ಟಿಸಿರುವ ಪ್ರಶಸ್ತಿಯಾಗಿದೆ.. 2026ರ ವಿಶ್ವಕಪ್‌ನ ಅಧಿಕೃತ ಡ್ರಾ ಸಮಾರಂಭದಲ್ಲಿ ಈ ಗೌರವವನ್ನ ಟ್ರಂಪ್‌ಗೆ ನೀಡಲಾಯಿತು. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದೊಂದಿಗೆ ಸಹ-ಆತಿಥ್ಯ ವಹಿಸುತ್ತಿರುವ ಈ ಟೂರ್ನಮೆಂಟ್‌ನ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಹಾಗೇ ಫುಟ್‌ಬಾಲ್ ಇಂದು ಜಾಗತಿಕ ಕ್ರೀಡೆಯಾಗಿದೆ. ಈ ಕಾರಣಕ್ಕೆ ಜಾಗತಿಕ ಸಂಸ್ಥೆಯಾಗಿರುವ ಫಿಫಾ ಈ ವರ್ಷದಿಂದ ಶಾಂತಿ ಪ್ರಶಸ್ತಿಯನ್ನ ನೀಡುವುದಾಗಿ ಹೇಳಿಕೊಂಡಿದೆ… ಹಾಗಾಗಿ ಇನ್ಫಾಂಟಿನೊವು ಶಾಂತಿ ಪ್ರಶಸ್ತಿ ಪ್ರಮಾಣಪತ್ರವನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಕೊಟ್ಟಿದೆ.. ಇನ್ನೂ ಟ್ರಂಪ್ ಬಗ್ಗೆ ಮಾತನಾಡುತ್ತಾ…ವಿಶ್ವದಾದ್ಯಂತ ಶಾಂತಿ ಮತ್ತು ಒಗ್ಗಟ್ಟನ್ನು ಉತ್ತೇಜಿಸುವಲ್ಲಿ ಅಧ್ಯಕ್ಷರ ಕ್ರಮ ಗುರುತಿಸಲಾಗಿದೆ. ಗಾಜಾದಲ್ಲಿ ಕದನ ವಿರಾಮ ಮಾಡುವಲ್ಲಿ ನಿಮ್ಮ ಕ್ರಮಗಳನ್ನು ಗಮನಿಸಲಾಗಿದೆ. ನಮಗೆ ಜನರ ಬಗ್ಗೆ ಕಾಳಜಿ ವಹಿಸುವ ನಿಮ್ಮಂತ ನಾಯಕರು ಬೇಕು ಎಂದು ಹೊಗಳಿದ್ದಾರೆ. ಇನ್ನು, ನೀವು ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದೀರಿ ಇದು ನಿಮ್ಮ ಪ್ರಶಸ್ತಿ, ಇದು ನಿಮ್ಮ ಶಾಂತಿ ಪ್ರಶಸ್ತಿ ಎಂದು ಒತ್ತಿ ಹೇಳಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ನಾನೇ ಶಾಂತಿದೂತನೆಂದ ಟ್ರಂಪ್
ಇನ್ನೂ ಅಮೆರಿಕ ಅಧ್ಯಕ್ಷ ಪ್ರಶಸ್ತಿ ಪಡೆದು ಮಾತನಾಡುತ್ತಾ.. ಇದು ನಿಜವಾಗಿಯೂ ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನ ಮೀರಿ, ಅತ್ಯಂತ ಮುಖ್ಯವಾದ ವಿಷಯ ಏನಂದ್ರೆ.. ನಾವು ಲಕ್ಷಾಂತರ ಜೀವಗಳನ್ನ ಉಳಿಸಿದ್ದೇವೆ..ಇದಕ್ಕೆ ಕಾಂಗೋ ಒಂದು ಉದಾಹರಣೆ. 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ಕೊಲ್ಲಲ್ಪಟ್ಟರು, ಮತ್ತು ಅದು ಬೇಗನೆ ಮತ್ತೊಂದು 10 ಮಿಲಿಯನ್‌ಗೆ ತಲುಪುತ್ತಿತ್ತು.. ಅದ್ರಲ್ಲಿ ನಾವು ಮಧ್ಯಪ್ರವೇಶಿಸಿ ಅದನ್ನ ನಿಲ್ಲಿಸಲು ಸಹಾಯ ಮಾಡಿರೋದು.. ಈ ವಿಷಯ ನನಗೆ ತುಂಬಾ ಹೆಮ್ಮೆಯ ಸಂಗತಿ ಅಂತ ಹೇಳಿದ್ದಾರೆ.
ಭಾರತವನ್ನ ತರಾಟೆಗೆ ತೆಗೆದುಕೊಂಡ ದೊಡ್ಡಣ್ಣ
ಈ ವೇಳೆ ಮತ್ತೆ, ಪಾಕ್-ಭಾರತ ನಡುವಿನ ಶಾಂತಿ ಮಾತುಕತೆಗೆ ಕ್ರೇಡಿಟ್ ಪಡೆಯೋಕೆ ಪ್ರಯತ್ನಿಸಿದ ಟ್ರಂಪ್ ನಾನು ಅನೇಕ ವಿಭಿನ್ನ ಸಂಘರ್ಷಗಳನ್ನ ಪರಿಹರಿಸಿದ್ದೆನೆ, ಅದ್ರಲ್ಲಿ ಕೆಲವನ್ನ ಯುದ್ದ ಆರಂಭವಾಗುವ ಮೊದಲೇ ನಿಲ್ಲಿಸಿದ್ದೇನೆ… ಅದ್ರಲ್ಲಿ ಭಾರತ-ಪಾಕಿಸ್ತಾನ ಕೂಡ ಒಂದು ಹಾಗಾಗಿ ನಾನೇ ಶಾಂತಿ ದೂತನೆಂದು ಮತ್ತೆ ಪ್ರಚಾರಿಸಿ ಕೊಂಡಿದ್ದಾರೆ.. ಆದ್ರೆ ಭಾರತದ ನಿಲುವು ಮಾತ್ರ ಸ್ಪಷ್ಟ ಇದು ಪೂರ್ಣ 2 ಬಣದ ಸೇನಾ-ಮಟ್ಟದ ಮಾತುಕತೆಯ ಫಲ..ಇದ್ರಲ್ಲಿ ಯಾವುದೇ ಬಾಹ್ಯ ಮಧ್ಯಸ್ಥಿಕೆ ನಡೆದಿಲ್ಲ.
ಇದನ್ನೂ ಓದಿ : ಕೆಲಸದ ಅವಧಿ ಮುಗಿದ ಮೇಲೆ ಬಾಸ್ ಫೋನ್, ಇ-ಮೇಲ್‌ಗೆ “ನೋ” ಅನ್ನಬಹುದಾದ ಮಸೂದೆ ಲೋಕಸಭೆಯಲ್ಲಿ ಮಂಡನೆ



















