ʻ777 ಚಾರ್ಲಿʼ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಕೆ. ಅವರು ಹಸೆಮಣೆ ಏರಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಅನಯ ವಸುಧಾ ಅವರೊಂದಿಗೆ ಕಿರಣ್ ರಾಜ್ ಅವರ ಮದುವೆ ಎಂಗೇಜ್‌ಮೆಂಟ್ ನಡೆದಿತ್ತು. ಇದೀಗ ವಿವಾಹವಾಗಿದ್ದಾರೆ.

ಅನಯ ವಸುಧಾ ಅವರು ವೃತ್ತಿಪರ ನೃತ್ಯಗಾರ್ತಿ ಆಗಿದ್ದು, ಇವರಿಬ್ಬರು ಕಾಸರಗೋಡಿನವರು. ಇದೀಗ ಇವರಿಬ್ಬರ ಮದುವೆ ಫೋಟೋಗಳು ಸಖತ್ ವೈರಲ್ ಆಗಿವೆ. ಮದುವೆಗೆ ನಟ ರಕ್ಷಿತ್ ಶೆಟ್ಟಿ ಅವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

ಹಲವು ದಿನಗಳ ಮದುವೆ ತಯಾರಿ ಜೋರಾಗಿದ್ದು, ಇದೀಗ ಕಿರಣ್ ರಾಜ್ ಶಾಸ್ತ್ರೋಕ್ತವಾಗಿ ಕುಟುಂಬಸ್ಥರು, ಸ್ನೇಹಿತರು, ಆಪ್ತರನ್ನು ಕರೆಸಿ ವಿವಾಹವಾಗಿದ್ದಾರೆ.
ಇದನ್ನೂ ಓದಿ : ಕಾವ್ಯಾ ಬೆನ್ನಿಗೆ ಚೂರಿ ಹಾಕಿ ನಾಮಿನೇಟ್ ಮಾಡಿದಾ ರಕ್ಷಿತಾ ಶೆಟ್ಟಿ | ಪ್ರೋಮೋ ಔಟ್



















