ಬೆಂಗಳೂರು : ದುಷ್ಟರ ಅಟ್ಟಹಾಸ ಮಿತಿಮೀರಿದಾಗ, ಮಟ್ಟ ಹಾಕೋಕೆ ಬಂದಳು ದೇವಿ. ಝೀ ಪವರ್ ವಾಹಿನಿಯಲ್ಲಿ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿರುವ ‘ಗೌರಿ’ ಧಾರವಾಹಿಯಲ್ಲೊಂದು ಅಮೋಘ ಸಂಚಿಕೆ.

ಕಿರುತೆರೆಯ ಖ್ಯಾತ ನಟಿ ಕಾವ್ಯಶ್ರೀ ಗೌಡ ಹಾಗೂ ಸುಷ್ಮೀತ್ ಜೈನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಗೌರಿ ಧಾರಾವಾಹಿ ತನ್ನ ವಿಭಿನ್ನ ಕಥಾ ಹಂದರದಿಂದ ಈಗಾಗಲೇ ಕನ್ನಡಿಗರ ಮನೆ ತಲುಪಿದೆ.
ಈಗ ಗೌರಿ ಧಾರಾವಾಹಿಯ ಸಂಚಿಕೆಯಲ್ಲಿ ಕನ್ನಡಿಗರಿಗೆ ದೇವಿ ದರ್ಶನ ಮಾಡಿಸಲಿದ್ದಾರೆ. ನಾಯಕಿಗೆ ದುಷ್ಟರಿಂದ ಸಂಕಷ್ಟ ಎದುರಾಗುತ್ತದೆ, ದೇವಿ ಆಶೀರ್ವಾದ ಇರುವ ವಿಶೇಷ ಶಕ್ತಿಯುಳ್ಳ ಮಣಿಹಾರವನ್ನ ಕೈವಶ ಮಾಡಲು ದುಷ್ಟರು ಹಸ್ತಕ್ಷೇಪ ಮಾಡಿದಾಗ ಅವರನ್ನ ಶಿಕ್ಷಿಸಲು ದೇವಿ ಬಾಸವಾಗುತ್ತಾಳೆ. ಕಥಾ ನಾಯಕಿ ಗೌರಿ ದುಷ್ಟರಿಗೆ ತೀರ್ಪು ನೀಡೋಕೆ ತೆರೆ ಮೇಲೆ ದೇವಿ ರೂಪತಾಳಿ ಬರಲಿದ್ದಾರೆ.
ಇದನ್ನೂ ಓದಿ : ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯಿಂದ ಕೇಸರಿ ಧ್ವಜಾರೋಹಣ : ಮಂದಿರ ನಿರ್ಮಾಣ ಕಾರ್ಯ ಪೂರ್ಣ


















