ಬೆಂಗಳೂರು : ಸಿದ್ದರಾಮಯ್ಯ ಕೊಟ್ಟ ಮಾತನ್ನು ತಪ್ಪೋದಿಲ್ಲ, ಅದೃಷ್ಟ ಇದ್ದರೆ ನಮ್ಮಣ್ಣ ಡಿಕೆಶಿ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯುವವರು. ಯಾರಿಗೆ ಏನೇ ಮಾತು ಕೊಟ್ಟಿದ್ದರೂ ಅವರು ತಪ್ಪಲ್ಲ. ಅದೃಷ್ಟ ಇದ್ರೆ ನಮ್ಮಣ್ಣ ಮುಖ್ಯಮಂತ್ರಿ ಆಗುತ್ತಾರೆ ಎಂದು ಮಾತನಾಡಿದ್ದಾರೆ.
ಕೊಟ್ಟ ಮಾತು ಪರೋಕ್ಷವಾಗಿ ನೆನೆಸಿದ ಡಿಕೆ ಸುರೇಶ್, ಪಕ್ಷ ಏನ್ ಆದೇಶ ಕೊಡುತ್ತೆ ಎಲ್ಲಾ ಪಾಲಿಸಬೇಕು. ಇದರ ಬಗ್ಗೆ ಎಲ್ಲಾ ಸಿಎಂ, ಡಿಸಿಎಂ, ವರಿಷ್ಠರು ಕೂತು ಚರ್ಚಿಸುತ್ತಾರೆ. ಅವರವರ ಅಭಿಮಾನಿಗಳಿಗೆ ಆಸೆ ಇದ್ದೇ ಇರುತ್ತಲ್ವಾ ಎಂದು ಕೊಟ್ಟ ಮಾತಿನ ದಾಳ ಉರುಳಿಸಿದ ಡಿಕೆ ಬ್ರದರ್ಸ್
ಇದನ್ನೂ ಓದಿ : ರಾಜ್ಯದಲ್ಲಿ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ..ಇನ್ನೂ 5 ವರ್ಷ ಆದ್ಮೇಲೆ ಎಲೆಕ್ಷನ್ ನಡಿಯೋದು : ಸಿದ್ದರಾಮಯ್ಯ



















