ಬೆಂಗಳೂರು : ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮೌನದ ದಾರಿಗೆ ಜಾರಿಬಿಟ್ಟಿದ್ದಾರೆ. ಜೈಲುವಾಸದ ನೋವುಗಳನ್ನ ಹೇಳಿಕೊಳ್ಳಲಾಗದೆ ದರ್ಶನ್ ವಿಲವಿಲ ಒದ್ದಾಡುತ್ತಿದ್ದಾರೆ. ದರ್ಶನ್ ಯಾವಾಗ ಹೊರ ಬರ್ತಾರೆ ಎಂಬ ಪ್ರಶ್ನೆಗಂತೂ ಉತ್ತರವಿಲ್ಲ. ದರ್ಶನ್ ಮೌನದ ದಾರಿಯೂ ಸುಲಭವಾಗಿ ಅರ್ಥವಾಗುವಂತಿಲ್ಲ.

ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಎರಡನೇ ಬಾರಿ ಅರೆಸ್ಟ್ ಆದ ನಟ ದರ್ಶನ್, ಬೇಲ್ ಗಾಗಿ ಶತಾಯಗತಾಯ ಪ್ರಯತ್ನ ನಡೆಸಿಬಿಟ್ರು. ವಕೀಲರ ಬದಲಾವಣೆಗೂ ದರ್ಶನ್ ಹೆಣಗಾಡಿಬಿಟ್ರು. ದರ್ಶನ್ ಹೇಗಿರ್ಬೋದಿತ್ತು, ಆದರೆ ಈಗ ಹೇಗಿದ್ದಾರೆ ಎಂಬ ಚಿತ್ರರಂಗ ಮತ್ತು ಅಭಿಮಾನಿಗಳ ಕಾಳಜಿ ಮಾತ್ರ ಕಡಿಮೆಯಾಗಲಿಲ್ಲ. ದರ್ಶನ್ ಸೆಂಟ್ರಲ್ ಜೈಲಿನಲ್ಲಿ ಹಾಸಿಗೆ ದಿಂಬು ಇಲ್ಲದೇ ಒದ್ದಾಡಿದ್ದು, ಪಶ್ಚಾತಾಪದ ಇನ್ನೊಂದು ಪರಿಯಾಗಿ ಕಾಣಿಸ್ತಿತ್ತು.
ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಕೈಗೆ ಪೆಟ್ಟಾಗಿರೋ ಕಾರಣ ಹಳೆ ನೋವು ಮತ್ತೆ ಕಾಣಿಸಿಕೊಂಡಿದೆ. ಹಾಗಾಗಿಯೇ ದರ್ಶನ್ ಗೆ ರಾತ್ರಿ ನಿದ್ರೆ ಕೂಡ ಬರುತ್ತಿಲ್ಲ. ಹೊರ ಪ್ರಪಂಚದಲ್ಲಿ ಏನಾಗ್ತಿರಬಹುದು ಎಂಬ ಅಂದಾಜು ದರ್ಶನ್‌ಗೆ ಇದೆ. ದರ್ಶನ್ ಸಹಚರ ಮತ್ತು ನಟ ಧನ್ವೀರ್ ಜೈಲಿನ ವಿಡಿಯೋ ಲೀಕ್ ವಿಚಾರಣೆ ಎದುರಿಸುತ್ತಿದ್ರೆ, ಮತ್ತೊಂದು ಕಡೇ ವಿಜಯಲಕ್ಷ್ಮಿ ಡೆವಿಲ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಡೆವಿಲ್ ಚಿತ್ರತಂಡ ಮತ್ತು ಡಿಬಾಸ್ ಅಸೋಸಿಯೇಶನ್ ಜೊತೆ ವಿಜಯಲಕ್ಷ್ಮಿ ಮೀಟಿಂಗ್ ಹಮ್ಮಿಕೊಂಡಿದ್ರು. ಈ ಮೀಟಿಂಗ್ ವಿಡಿಯೋ ಈಗ ಡಿ ಬಳಗಕ್ಕೆ ಕೊಂಚ ಎನರ್ಜಿ ಕೊಟ್ಟಿದೆ. ಡೆವಿಲ್ ಪ್ರಚಾರಕಾರ್ಯಗಳ ರೂಪುರೇಷೆ ಬಗ್ಗೆ ವಿಜಯಲಕ್ಷ್ಮಿ ಈಗಾಗಲೇ ಪ್ಲ್ಯಾನ್ ಮಾಡಿಕೊಂಡಿರೋದು ಗೊತ್ತಾಗುತ್ತೆ. ಡಿ.1 ಕ್ಕೆ ಡೆವಿಲ್ ಟ್ರೈಲರ್ ಬರೋ ಮುನ್ಸೂಚನೆ ಸಿಕ್ಕಿದೆ.

ಮಾತಿಗೆ ಒಂದೇ ಅರ್ಥ.. ಆದರೆ ಮೌನಕ್ಕೆ ಸಾವಿರ ಅರ್ಥ ಎಂಬ ಸತ್ಯ ದರ್ಶನ್ ಜೀವನದಲ್ಲಿ ನಿಜವಾಗಿಹೋಯ್ತಾ? ಸೆಂಟ್ರಲ್ ಜೈಲಿನಲ್ಲಿ ದಿನಗಳನ್ನ ದೂಡ್ತಿರೋ ದರ್ಶನ್‌ಗೆ ಜೀವನಪಾಠ ಅಂದ್ರೆ ಈ ಕ್ಷಣವೇ. ಪ್ರಕರಣದ ವಿಚಾರಣೆಯನ್ನ ಕೋರ್ಟ್ ಡಿ.3ಕ್ಕೆ ಮುಂದೂಡಿದೆ. ಈಗ ದರ್ಶನ್‌ಗೆ ಕಂಬಳಿ ಸಿಕ್ಕಿದೆ. ಮುಂದೇನಾಗುತ್ತೆ ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿದುಬಿಟ್ಟಿದೆ.
ಇದನ್ನೂ ಓದಿ : ಹೊಸ ಸರ್ಕಾರವು ಜನರ ನಿರೀಕ್ಷೆಗಳನ್ನು ಪೂರೈಸಲಿ | ಸಿಎಂ ನಿತೀಶ್ ಕುಮಾರ್ಗೆ ತೇಜಸ್ವಿ ಯಾದವ್ ಅಭಿನಂದನೆ!



















