ಶಿವಮೊಗ್ಗ : ಎಲ್ಲಾ ಪಕ್ಷಗಳು ಒಟ್ಟಾಗಿ ನಿಂತು ದೆಹಲಿ ಪರ ನಿಲ್ಲಬೇಕಿದೆ. ಆದರೆ ಕಾಂಗ್ರೆಸ್ ನಾಯಕರು ಮನ ಬಂದಂತೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಈ ತನಕ ಘಟನೆ ಕುರಿತು ಹೇಳಿಕೆಯಾಗಲಿ, ಖಂಡನೆಯ ಅಗಲಿ ನೀಡಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಇಂತಹ ಸಂದರ್ಭದಲ್ಲಿ ಇದು ಭಯೋತ್ಪಾದಕ ದಾಳಿ ಎಂದೇ ಹೇಳಬೇಕು. ಗೃಹ ಸಚಿವರು ತಕ್ಷಣವೇ ಆಸ್ಒಇ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಸಂಸತ್ ಭವನ, ರಾಷ್ಟ್ರಪತಿ ಭವನ, ಸೇನಾ ಕಚೇರಿ ಸೇರಿದಂತೆ ಅನೇಕ ಸ್ಥಳಗಳು ಟಾರ್ಗೆಟ್ ಆಗಿತ್ತು ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ದೇಶದ ಪರವಾಗಿ ನಿಂತು ಉಗ್ರ ಕೃತ್ಯವನ್ನು ರಾಹುಲ್ ಗಾಂಧಿ ಖಂಡಿಸಿಲ್ಲ. ಈ ನಡುವೆ ಕಾಂಗ್ರೆಸ್ಸಿಗರು ಗೃಹ ಸಚಿವರಿಗೆ ಬಳೆ ಕಳಿಸುವ ಕೆಲಸ ಮಾಡಿದ್ದಾರೆ. ಇದೇ ರೀತಿ ಮಾಡಿದರೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ನಾಯಕರಿಗೆ ಎಷ್ಟು ಸಲ ಬಳೆ ಕಳಿಸಬೇಕಾಗುತ್ತಿತ್ತು. ಅದಕ್ಕಾಗಿ ಬಳೆಯ ಫ್ಯಾಕ್ಟರಿ ಯನ್ನೇ ತೆರೆಯಬೇಕಾಗುತ್ತಿತ್ತು ಎಂದು ಕಿಡಿಕಾರಿದ್ದಾರೆ.
ಕಬ್ಬು ಬೆಳೆಗಾರರ ಮುಂದುವರಿದ ಹೋರಾಟ
ಸಿಎಂ ಆದಿಯಾಗಿ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತಿಲ್ಲ. ತಕ್ಷಣವೇ ಕಬ್ಬು ಬೆಳೆಗಾರರ ಜತೆಗೆ ಮೆಕ್ಕೆಜೋಳ ಖರೀದಿ ಬಗ್ಗೆಯೂ ಗಮನ ಹರಿಸಬೇಕು. ಇದರ ಜೊತೆಗೆ ಬರ ಪರಿಹಾರದ ವಿಷಯದಲ್ಲೂ ನಿರ್ಲಕ್ಷ್ಯ ವಹಿಸಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಯಾವ ಪುಣ್ಯಾತ ಈ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಕೊನೆಗೂ ಹೈಕೋರ್ಟ್ ಅನುಮತಿ | ಆದರೆ, ಷರತ್ತುಗಳು ಅನ್ವಯ!



















