ಕೋಲಾರ:ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಧಾರುಣ ಘಟನೆ ಕೋಲಾರ ತಾಲೂಕಿನ ಹೊಗರಿಗೊಲ್ಲಹಳ್ಳಿಯಲ್ಲಿ ನಡೆದಿದೆ.
ತಾಯಿ ಮಾಲಾ (30) ಹಾಗೂ ಮಗು ಚಕ್ರವರ್ತಿ (06) ಸಾವನ್ನಪ್ಪಿದ್ದಾರೆ. ಮಗ ಚಕ್ರವರ್ತಿ ಆಟವಾಡುತ್ತಾ ಕೃಷಿ ಹೊಂಡದ ಬಳಿ ತೆರಳಿದ್ದಾನೆ. ಜಾನುವಾರುಗಳಿಗೆ ಮೇವು ಕಟಾವು ಮಾಡುತ್ತಿದ್ದ ಮಾಲಾ ಇದನ್ನು ಗಮನಿಸಿರಲಿಲ್ಲ. ಮಗ ಕೃಷಿ ಹೊಂಡಕ್ಕೆ ಬಿದ್ದ ಬಳಿಕ ಆತನನ್ನು ಕಾಪಾಡಲು ಹೋಗಿ ಮಾಲಾ ಕೂಡ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಟ್ಟೆ ತೊಳೆಯುವಾಗ ನಾಲೆಗೆ ಕಾಲು ಜಾರಿ ಬಿದ್ದ ಬಾಲಕಿ | ರಕ್ಷಣೆಗೆ ಮುಂದಾದ ನಾಲ್ವರು ಮಕ್ಕಳು ನೀರುಪಾಲು



















