ಬೈಂದೂರು : ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಮೇಕೋಡು – ಉಳ್ಳೂರು -11 ಸಂಘದ 2024-2025ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಮೇಕೋಡಮ್ಮ ಸಭಾಭವನದಲ್ಲಿ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿರುವುದು ಮಹತ್ತರವಾದ ಬೆಳವಣಿಗೆ ಆಗಿದೆ. ಸಂಘವು ಪ್ರಸ್ತುತ ಸಾಲಿನಲ್ಲಿ 7 ಲಕ್ಷದ 65ಸಾವಿರ ಲಾಭಗಳಿಸಿದ್ದು, ಹಾಲು ಉತ್ಪಾದಕ ಸದಸ್ಯರಿಗೆ ಶೇ.65ರಷ್ಟು ಬೋನಸ್ ಹಾಗೂ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಘೋಷಣೆ ಮಾಡಿದ್ದಾರೆ.
ಹಿಂದಿನ ಸಾಲಿನ ಸಂಘದ ಸದ್ಯಸರ ಹಾಲಿನ ಆಧಾರದ ಮೇಲೆ ಬಹುಮಾನ ನೀಡಲಾಗಿದೆ. 2000 ಲೀಟರ್ ಹಾಲು ಉತ್ಪಾದನೆ ಮಾಡುವುದರ ಮೂಲಕ ಮುಂದಿನ ವರ್ಷ ನಮ್ಮ ಪ್ರಮುಖ ಗುರಿಯಾಗಿದೆ ಮತ್ತು ಮುಂದಿನ ಹಾಲು ಉತ್ಪಾದನೆಯಲ್ಲಿ ತೊಡಗಿ ಕೊಳ್ಳುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್. ಕುಶಲ್ ಕುಮಾರ್ ಅವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು.
ಅಧ್ಯಕ್ಷರು ಸಂಘದ ಸದಸ್ಯರಿಂದ ಅನುಮೋದನೆ ಪಡೆದುಕೊಂಡು ಸಂಘದ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಮತ್ತು ಸಂಘದ ಹಾಲು ಉತ್ಪಾದಕರಿಗೆ ಶೇ.65ರಷ್ಟು ಬೋನಸ್ ಘೋಷಣೆ ಮಾಡಿದರು.
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಉಪ ವ್ಯವಸ್ಥಾಪಕರಾದ ಶಂಕರ್ ನಾಯ್ಕ್, ವಿಸ್ತರಣಾಧಿಕಾರಿ ರಾಜರಾಮ್, ಉಪಾಧ್ಯಕ್ಷರಾದ ಸಂತೋಷ ಗೌಡ, ಕೊಣಾಲ್ ನಿರ್ದೇಶಕರಾದ ಗೋಪಾಲ ಶೆಟ್ಟಿ ಯರುಕೋಣೆ, ಎನ್. ಪದ್ಮನಾಭ ಅಡಿಗ, ವೈ. ಜಯರಾಮ ಹೆಬ್ಬಾರ್, ವೈ. ಗೋವಿಂದ ಹೆಬ್ಬಾರ್, ಎಂ.ಎನ್ ಬಾಬು ಮಾಜಾರಿ, ಭಾಸ್ಕರ ದೇವಾಡಿಗ, ಉಳ್ಳೂರು 11, ಉಮೇಶ ಪೂಜಾರಿ, ಉಪ್ರಳ್ಳಿ, ಕುಷ್ಟು, ಯರುಕೋಣೆ, ಲೀಲಾವತಿ ಪೂಜಾರಿ, ಸುಶೀಲ ಗಾಣಿಗ ನೂಜಾಡಿ, ಗೌರಿ ಬಿ. ಉಳ್ಳೂರು 11,ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎಚ್. ಕುಶಲ್ ಕುಮಾರ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿದರು.ದಿನೇಶ್ ಆಚಾರ್ಯ ನಿರೂಪಿಸಿ ವಂದಿಸಿದರು.



















