ಬೆಂಗಳೂರು: ಹಬ್ಬದ ಸೀಸನ್ ಶುರುವಾಗಿದೆ. ಮನೆಗೆ ಟಿವಿ, ಫ್ರಿಡ್ಜ್ ಸೇರಿ ಹಲವು ವಸ್ತುಗಳನ್ನು ಖರೀದಿಸಬೇಕು. ಇಎಂಐ ಮೂಲಕ ಖರೀದಿಸೋಣ ಎಂದರೆ ಕ್ರೆಡಿಟ್ ಕಾರ್ಡ್ ಇಲ್ಲ. ದುಡ್ಡಿಗೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಚಿಂತೆ ಬೇಡ, ಪೇಟಿಎಂ ಕಂಪನಿಯು ಬಡ್ಡಿರಹಿತವಾಗಿ 60 ಸಾವಿರ ರೂಪಾಯಿ ಖರ್ಚು ಮಾಡುವ ಆಫರ್ ಅನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಿಂದ ಗ್ರಾಹಕರು 60 ಸಾವಿರ ರೂಪಾಯಿವರೆಗೆ ಪೇಟಿಎಂ ಮೂಲಕ ಖರ್ಚು ಮಾಡಿ, ಒಂದು ತಿಂಗಳ ನಂತರ ಪಾವತಿ ಮಾಡಬಹುದಾಗಿದೆ.
ಹೌದು, ಪೇಟಿಎಂ ಕಂಪನಿಯು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹಯೋಗದಲ್ಲಿ ಪೇಟಿಎಂ ಪೋಸ್ಟ್ ಪೇಯ್ಡ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಒಂದು ತಿಂಗಳಲ್ಲಿ ಆನ್ ಲೈನ್ ಶಾಪಿಂಗ್ ಸೇರಿ ಯಾವುದೇ ವೆಚ್ಚಗಳನ್ನು ಪೇಟಿಎಂ ಮೂಲಕ ಪಾವತಿಸಿ, ಮುಂದಿನ ತಿಂಗಳು 1ನೇ ತಾರೀಖಿನಂದ ಪಾವತಿಸಬಹುದಾಗಿದೆ. ಇದಕ್ಕಾಗಿ ಸ್ವಲ್ಪ ಶುಲ್ವಿರುತ್ತದೆಯೇ ಹೊರತು, ಯಾವುದೇ ಬಡ್ಡಿ ಇರುವುದಿಲ್ಲ ಎಂದು ಪೇಟಿಎಂ ತಿಳಿಸಿದೆ.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
– ಪೇಟಿಎಂ ಆ್ಯಪ್ ಓಪನ್ ಮಾಡಿ, ಮರ್ಚೆಂಟ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ನಂತರ ಕ್ರೆಡಿಟ್ ಲೈನ್ ಆಯ್ಕೆ ಮಾಡಿ ಪಾವತಿ ಮಾಡಬೇಕು.
– ಸಾಮಾನ್ಯ ಯುಪಿಐನಂತೆಯೇ ಪಿನ್ ಕೋಡ್ ಹಾಕಿ, ಟ್ರಾನ್ಸ್ಯಾಕ್ಷನ್ ಕಂಪ್ಲೀಟ್ ಮಾಡಬೇಕು.
– ಕ್ಯೂಆರ್ ಕೋಡ್, ಆನ್ ಲೈನ್ ಖರೀದಿಗಳುಗೆ ಈ ಕ್ರೆಡಿಟ್ ಲೈನ್ ಅನ್ನು ಬಳಸಿಕೊಳ್ಳಬಹುದು.
– ಬೇರೊಬ್ಬರಿಗೆ ಹಣ ಕಳುಹಿಸಲು ಆಗುವುದಿಲ್ಲ
– ಇದನ್ನು ಬಳಸಿ ತಿಂಗಳಿಗೆ 60 ಸಾವಿರ ರೂ. ಖರ್ಚು ಮಾಡಬಹುದು. ಇದಕ್ಕೆ. 30 ದಿನಗಳವರೆಗೆ ಯಾವುದೇ ಬಡ್ಡಿ ಇರುವುದಿಲ್ಲ. ಒಂದು ತಿಂಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
– ಪ್ರತಿ ತಿಂಗಳ ಒಂದನೇ ತಾರೀಖಿನಂದು ಬಿಲ್ಲಿಂಗ್ ಆಗುತ್ತದೆ.
ಗಮನಿಸಿ: ಪೇಟಿಎಂ ಹೊಸದಾಗಿ ಆರಂಭಿಸಿರುವ ಕ್ರೆಡಿಟ್ ಲೈನ್ ಪೋಸ್ಟ್ ಪೇಯ್ಡ್ ಯೋಜನೆ ಬಗ್ಗೆ ಮಾಹಿತಿ ದೃಷ್ಟಿಯಿಂದ ಮಾತ್ರ ನಾವು ಲೇಖನವನ್ನು ಪ್ರಕಟಿಸಿದ್ದೇವೆ. ಇದು ನೀವು ಸಾಲ ಪಡೆಯಲು, ಹಣ ಖರ್ಚು ಮಾಡಲು ನಾವು ಶಿಫಾರಸು ಮಾಡುತ್ತಿಲ್ಲ. ಯಾವುದೇ ರೀತಿಯ ಹಿಡನ್ ಚಾರ್ಜಸ್ ಬಗ್ಗೆ ಎಚ್ಚರದಿಂದ ಇರಿ. ದಾಖಲೆ, ಷರತ್ತುಗಳನ್ನು ಓದಿಕೊಂಡೇ ಮುಂದುವರಿಯಿರಿ. ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ.



















