ಬೆಂಗಳೂರು: ಕೇಂದ್ರ ಸರ್ಕಾರವು ದೇಶಾದ್ಯಂತ ಶೌಚಾಲಯ ನಿರ್ಮಿಸಲು ಸ್ವಚ್ಛ ಭಾರತ್ ಯೋಜನೆ (Swacch Bharat Mission) ಜಾರಿಗೆ ತಂದಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸುವ ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ 12 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. ಈ ಹಣವನ್ನು ಬಳಸಿಕೊಂಡು, ಶೌಚಾಲಯ ನಿರ್ಮಿಸಿಕೊಳ್ಳಬಹುದಾಗಿದೆ. ಇದು ಹೆಣ್ಣುಮಕ್ಕಳ ಗೌರವದ ಪ್ರಶ್ನೆಯೂ ಆಗಿದೆ. ಹಾಗಾಗಿ, ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಶೌಚಾಲಯ ನಿರ್ಮಿಸಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಉಚಿತ ಶೌಚಾಲಯ ಯೋಜನೆಗೆ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು ನೀವು https://swachhbharatmission.ddws.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ Application Form For IHHL Dashboard ಕಾಣಿಸುತ್ತದೆ. ಅಲ್ಲಿಗೆ ಹೋಗಿ ನೀವು ರಿಜಿಸ್ಟ್ರೇಷನ್ ಮಾಡ್ಬೇಕು. ರಿಜಿಸ್ಟ್ರೇಷನ್ ಆದ ಬಳಿಕ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಬಳಿಕ ನೀವು ಸೈನ್ ಇನ್ ಮಾಡಿ, ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಮೊದಲು ಒಂದು ಪಾಪ್ ಅಪ್ ಕಾಣಿಸುತ್ತದೆ. ಅದ್ರಲ್ಲಿ ಯೋಜನೆ ಬಗ್ಗೆ ಎಲ್ಲ ಮಾಹಿತಿ ನೀಡಲಾಗುತ್ತದೆ. ಪಾಪ್ ಅಪ್ ಕ್ಲೋಸ್ ಮಾಡಿದ ಬಳಿಕ ಅರ್ಜಿ ಕಾಣಿಸುತ್ತದೆ. ಅಲ್ಲಿ ನಿಮಗೆ ಸಂಬಂದಿಸಿದ ಎಲ್ಲ ಮಾಹಿತಿ ನೀಡಿ, ದಾಖಲೆ ನೀಡಬೇಕು. ನಿಮ್ಮ ಅಪ್ಲಿಕೇಷನ್ ಮಾನ್ಯವಾದರೆ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಪರಿಶೀಲನೆ ನಡೆಸುತ್ತಾರೆ. ನಿಮ್ಮ ಮನೆಯಲ್ಲಿ ಮೊದಲೇ ಶೌಚಾಲಯ ಇಲ್ಲ ಎನ್ನುವುದು ಗೊತ್ತಾದ ಬಳಿಕ ಮಹಿಳೆಯರ ಬ್ಯಾಂಕ್ ಖಾತೆಗೆ 12 ಸಾವಿರ ರೂಪಾಯಿ ಜಮೆಯಾಗುತ್ತದೆ
ಇದಾದ ಬಳಿಕ ನೀವು ಶೌಚಾಲಯ ನಿರ್ಮಾಣದ ಫೋಟೋಗಳನ್ನು ಅವರಿಗೆ ಕಳುಹಿಸುತ್ತಿರಬೇಕು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ನೀವು ಗ್ರಾಮ ಪಂಚಾಯಿತಿ ಅಥವಾ ಬ್ಲಾಕ್ ಅಭಿವೃದ್ಧಿ ಕಚೇರಿಗೆ ತೆರಳಿ, ಅರ್ಜಿ ಸಲ್ಲಿಸಬಹುದು. ಶೌಚಾಲಯ ನಿರ್ಮಾಣದ ಮೊದಲು 6 ಸಾವಿರ ರೂ. ಹಾಗೂ ನಿರ್ಮಾಣದ ನಂತರ 6 ಸಾವಿರ ರೂಪಾಯಿ ನೀಡಲಾಗುತ್ತದೆ.



















