ಬೆಂಗಳೂರು : ಕೊಪ್ಪಳದ ಗವಿಸಿದ್ದಪ್ಪ ನಾಯಕ ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಿಯೋಗದಿಂದ ಇಂದು(ಬುಧವಾರ) ರಾಜಪಾಲರ ಭೇಟಿ ಮಾಡಿ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಮನವಿ ಮಾಡಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ಇನ್ನು, ಆ. 3ರಂದು ರಾತ್ರಿ ಕೊಪ್ಪಳದ ವಾರ್ಡ್ ನಂಬರ್ ಮೂರರ ಮಸೀದಿ ಮುಂಭಾಗ ಗವಿಸಿದ್ದಪ್ಪ ನಾಯಕ ಕೊಲೆ ಆಗಿತ್ತು. 27 ವರ್ಷದ ಗವಿಸಿದ್ದಪ್ಪ ನಾಯಕನನ್ನು ಮುಸ್ಲಿಂ ಯುವಕ ಸಾದಿಕ್ ಎಂಬುವವನು ಮಚ್ಚಿನಿಂದ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದನು. ನಂತರ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮುಸ್ಲಿಂ ಯುವತಿ ಜೊತೆಗಿನ ಪ್ರೇಮ ಪ್ರಕರಣವೇ ಕೊಲೆಗೆ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು. ಇದೇ ವಿಚಾರ ಸದನದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇಂದು ಬಿಜೆಪಿ ನಿಯೋಗ ಪ್ರಕರಣವನ್ನು ತನಿಖೆಗೆ ಒತ್ತಾಯಿಸಲು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.



















