ನವದೆಹಲಿ: ಭಾರತೀಯ ವಸ್ತುಗಳ ರಫ್ತಿನ ಮೇಲೆ ಅಮೆರಿಕ ಶೇ.25 ರಷ್ಟು ಸುಂಕ ವಿಧಿಸಿದೆ. ಇದರ ಬೆನ್ನಲ್ಲೇ ಟ್ರಂಪ್ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಟಕ್ಕರ್ ಕೊಟ್ಟಿದ್ದಾರೆ.
ವಾರಣಾಸಿಯಲ್ಲಿ ನಡೆದ ರ‍್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನೂ ‘ಸ್ವದೇಶಿ’ (Swadeshi) ವಸ್ತುಗಳನ್ನು ಖರೀದಿಸಲು ಸಂಕಲ್ಪ ಮಾಡಬೇಕು. ವಿಶ್ವದಲ್ಲಿ ಆರ್ಥಿಕತೆ ಸಾಕಷ್ಟು ಏರಿಳಿತ ಹೊಂದಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆದ್ದರಿಂದ, ಅದರ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಬಯಸುವ ಯಾರಾದರೂ ‘ಸ್ವದೇಶಿ’ ಖರೀದಿಸಲು ನಿರ್ಧರಿಸಬೇಕೆಂದು ಜನರನ್ನು ಉತ್ತೇಜಿಸಬೇಕು. ನಾಯಕರು ಇದೇ ಹಾದಿಯಲ್ಲಿ ಸಾಗಿ ಜನರನ್ನು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜನರು ಖರೀದಿಸುವ ಎಲ್ಲಾ ಹೊಸ ವಸ್ತುಗಳು ‘ಸ್ವದೇಶಿ’ ಎಂದು ಸಂಕಲ್ಪ ಮಾಡಬೇಕೆಂದು ಕೋರಿದ್ದಾರೆ.



















