ಉಡುಪಿ/ಬ್ರಹ್ಮಾವರ: ಸಾಮಾಜಿಕ ಹೋರಾಟಗಾರ ಹಾಗೂ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬಾರ್ಕೂರು ನಿಧನ ಹೊಂದಿದ್ದಾರೆ.
ಬ್ರಹ್ಮಾವರ ತಾಲೂಕು ರಚನೆಯಾಗಬೇಕೆಂದು ನಿರಂತರ ಹೋರಾಟ ನಡೆಸಿ ಮುಂಚೂಣಿಯಲ್ಲಿದ್ದ ಸತೀಶ್ ಪೂಜಾರಿ ಅವರು, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.
ಹನೆಹಳ್ಳಿ ಸಮೀಪದ ಮೂಡುಕೆರೆ ಮೂಲದವರಾದ ಸತೀಶ್ ಪೂಜಾರಿ, ಹನೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು



















