ಬೆಂಗಳೂರು: ಇಬ್ಬರು ಭ್ರಷ್ಟ ಎಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
NOC ನೀಡಲು 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಇಬ್ಬರು ಭ್ರಷ್ಟರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಹೆಬ್ಬಾಳ ಸಬ್ ಡಿವಿಷನ್ನ AEE ಮಹದೇವ್, ಆರ್ಎಂಬಿ ಬಿಬಿಎಂಪಿಯ AE ಆಗಿರುವ ಸುರೇಂದ್ರ ಎನ್ನಲಾಗಿದೆ.
ಇಬ್ಬರು ಎಂಜಿನಿಯರ್ಗಳು ಎನ್ಒಸಿ ನೀಡಲು 10 ಲಕ್ಷ ರೂ.ಗೆ ಬೇಟಿಕೆಯಿಟ್ಟಿದ್ದರು. ಈ ಕುರುತ ಸಂಜಯ್ ಎಂಬುವವರು ದೂರು ನೀಡಿದ್ದಾರೆ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತರು, ಎಇ ಸುರೇಂದ್ರನನ್ನು 5 ಲಕ್ಷ ರೂ. ಪಡೆಯುವಾಗ ಬಂಧಿಸಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದ್ದು, ಲಂಚದ ಹಣ ಜಪ್ತಿ ಮಾಡಿದ್ದಾರೆ.