ಬೆಂಗಳೂರು: ಜೆಸಿಬಿ ಮೇಲೆಯೇ ಬೃಹತ್ ಮರವೊಂದು ಉರುಳಿ ಬಿದ್ದಿರುವ ಘಟನೆ ನಡೆದಿದೆ.
ನಗರದ ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮರ ಬೀಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫೈಬರ್ ಕೇಬಲ್ ಅಳವಡಿಕೆ ಸಲುವಾಗಿ ಮರದ ಪಕ್ಕದಲ್ಲೇ ಗುಂಡಿ ತೆಗೆಯಲಾಗುತ್ತಿತ್ತು. ಗುಂಡಿ ತೆಗೆದ ಪರಿಣಾಮ ಮರದ ಬೇರುಗಳಿಗೆ ಡ್ಯಾಮೇಜ್ ಆಗಿ ಬೃಹತ್ ಮರ ಜೆಸಿಬಿ ಮೇಲೆಯೇ ಉರುಳಿ ಬಿದ್ದಿದೆ.