ನವೆಂಬರ್: ಮುಂದಿನ ತಿಂಗಳು ಅಂದರೆ ನವೆಂಬರ್ ನಲ್ಲಿ ಬ್ಯಾಂಕ್ ಗ್ರಾಹಕರು ಹಲವು ದಿನಗಳ ಕಾಲ ತಮ್ಮ ಬ್ಯಾಂಕ್ ಕೆಲಸಗಳಿಗೆ ಅಡ್ಡಿ ಎದುರಿಸಬೇಕಾಗಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್ ಗಳ ಶಾಖೆಗಳು ನವೆಂಬರ್ (Bank Holidays) ತಿಂಗಳಲ್ಲಿ ಹಲವು ದಿನಗಳ ಕಾಲ ಮುಚ್ಚಲಿವೆ. ಆರ್ ಬಿಐ ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿಯ ಪ್ರಕಾರ, ನವೆಂಬರ್ನಲ್ಲಿ ದೀಪಾವಳಿ, ಛತ್ ಪೂಜೆ, ಗುರುನಾನಕ್ ಜಯಂತಿ ಹಾಗೂ ವಿವಿಧ ಹಬ್ಬಗಳು ಮತ್ತು ವಾರದ ರಜೆಗಳ ಕಾರಣದಿಂದ ಬ್ಯಾಂಕ್ ಗಳಿಗೆ ಸರಣಿ ರಜೆಗಳು ಬರಲಿವೆ.
ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಪ್ರಾದೇಶಿಕ ಹಬ್ಬಗಳಿಗೆ ಅನುಗುಣವಾಗಿ ಈ ರಜೆಗಳು ಅನ್ವಯವಾಗುತ್ತವೆ. ಹಾಗಾಗಿ, ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮುನ್ನ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಅತ್ಯಗತ್ಯ.
ನವೆಂಬರ್ ತಿಂಗಳ ಪ್ರಮುಖ ಬ್ಯಾಂಕ್ ರಜಾ ದಿನಗಳು
ನವೆಂಬರ್ 1 (ಭಾನುವಾರ) ವಾರದ ರಜೆ ಮತ್ತು ಕನ್ನಡ ರಾಜ್ಯೋತ್ಸವ
ನವೆಂಬರ್ 8 (ಭಾನುವಾರ): ದೀಪಾವಳಿ, ಲಕ್ಷ್ಮಿ ಪೂಜೆ ಮತ್ತು ಕಾಳಿ ಪೂಜೆ (ಸಾಮಾನ್ಯ ಭಾನುವಾರ ರಜೆ).
ನವೆಂಬರ್ 9 (ಸೋಮವಾರ): ಗೋವರ್ಧನ ಪೂಜೆ ಮತ್ತು ವಿಶ್ವಕರ್ಮ ದಿನ (ಕೆಲವು ರಾಜ್ಯಗಳಲ್ಲಿ ಅನ್ವಯ).
ನವೆಂಬರ್ 10 (ಮಂಗಳವಾರ): ಬಲಿಪಾಡ್ಯಮಿ ಹಿನ್ನೆಲೆ ದೇಶದ ಬಹುತೇಕ ಕಡೆ ರಜೆ
ನವೆಂಬರ್ 11 (ಬುಧವಾರ): ಭಾಯ್ ದೂಜ್ ಹಾಗೂ ಚಿತ್ರಗುಪ್ತ ಜಯಂತಿ.
ನವೆಂಬರ್ 14 (ಶನಿವಾರ): ತಿಂಗಳ ಎರಡನೇ ಶನಿವಾರ ಹಾಗೂ ಮೇಘಾಲಯದಲ್ಲಿ ವಾಂಗಲಾ ಉತ್ಸವ.
ನವೆಂಬರ್ 15 (ಭಾನುವಾರ): ಛತ್ ಪೂಜೆ ಹಾಗೂ ಬಿರ್ಸಾ ಮುಂಡಾ ಜಯಂತಿ.
ನವೆಂಬರ್ 24 (ಮಂಗಳವಾರ): ಗುರುನಾನಕ್ ಜಯಂತಿ ಹಾಗೂ ಕಾರ್ತಿಕ ಹುಣ್ಣಿಮೆ (ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದೆಡೆ ರಜೆ).
ನವೆಂಬರ್ 27 (ಶುಕ್ರವಾರ) ಕರ್ನಾಟಕದಲ್ಲಿ ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ರಜೆ
ಆನ್ ಲೈನ್ ಸೇವೆಗಳು ಎಂದಿನಂತೆ ಲಭ್ಯ
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಗ್ರಾಹಕರು ಆತಂಕಪಡಬೇಕಿಲ್ಲ. ಯುಪಿಐ, ನೆಫ್ಟ್, ಆರ್ ಟಿಜಿಎಸ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ 24 ಗಂಟೆಯೂ ಸುಗಮವಾಗಿ ಕಾರ್ಯನಿರ್ವಹಿಸಲಿವೆ. ಹಣಕಾಸಿನ ತುರ್ತು ವರ್ಗಾವಣೆ ಹಾಗೂ ಇತರೆ ಡಿಜಿಟಲ್ ವಹಿವಾಟುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದಾಗ್ಯೂ, ನಗದು ಜಮೆ, ಚೆಕ್ ಕ್ಲಿಯರೆನ್ಸ್ ಅಥವಾ ನೇರ ದಾಖಲೆ ಪರಿಶೀಲನೆಗಾಗಿ ಶಾಖೆಗೆ ತೆರಳುವ ಮುಂಚಿತವಾಗಿ ನಿಮ್ಮ ಸ್ಥಳೀಯ ಬ್ಯಾಂಕ್ ರಜಾ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.



















