ಕಲಬುರ್ಗಿ : ಇಬ್ಬರು ಭಕ್ತರು ಕಾಲ್ನಡಿಗೆಯಲ್ಲೇ ಕೇದರನಾಥನ ದರ್ಶನ ಮಾಡಿರುವ ಅಚ್ಚರಿ ಘಟನೆ ನಡೆದಿದೆ. ಬರೊಬ್ಬರಿ 70 ವಯಸ್ಸು ತುಂಬಿದ ಈ ಇಬ್ಬರು ಕೇದಾರನಾಥನ ದರ್ಶನಕ್ಕೆ ಪಾದಯಾತ್ರೆ ಮೂಲಕ ಸಂಚಾರ ಮಾಡಿದ್ದಾರೆ. ಸಾವಿರದ ಇನ್ನೂರು ಕಿಮೀ ದಾರಿ ಜಸ್ಟ್ 60 ದಿನದಲ್ಲಿ ಮುಕ್ತಾಯ ಮಾಡಿದ್ದಾರೆ. ಮಾರ್ಚ್ ಒಂದರಿಂದ ಮೇ ಒಂದರವರೆಗೆ ಪಾದಯಾತ್ರೆಯನ್ನ ಕಂಪ್ಲೀಟ್ ಮಾಡಿದ್ದಾರೆ. ಈ ಭಕ್ತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.