ಆಪರೇಷನ್ ಸಿಂಧೂರ…ಪಾಕಿಸ್ತಾನವನ್ನು ಸದೆಬಡೆದೇ ಸಿದ್ಧ ಅಂತಾ ಶಪಥ ಮಾಡಿದ್ದ ಭಾರತಕ್ಕೆ ಮೂಗುದಾರ ಹಾಕಿದ್ದನ್ನ ಇದೀಗ ಜಗತ್ತಿನ ಮುಂದೆಯೇ ಅಮೆರಿಕ ಒಪ್ಪಿಕೊಂಡಿದೆ. ಯುದ್ಧ ನಿಲ್ಲಿಸೋ ವಿಚಾರದಲ್ಲಿ ತನ್ನದೇ ರಾಯಭಾರ ಅನ್ನೋದನ್ನ ಟ್ರಂಪ್ ಸಾಹೇಬ್ರು ಮೈಕ್ ಮುಂದೆ ನಿಂತು ಹೇಳಿದ್ದೇ ಹೇಳಿದ್ದು. ಅಸಲಿಗೆ ಮಿಸ್ಟರ್ ಟ್ರಂಪ್…ನಿಮ್ಮ ನೀತಿ ಹೇಗಿದೆ ಅಂದ್ರೆ ಹಾವೂ ಸಾಯಬಾರ್ದು ಕೋಲೂ ಮುರೀಬಾರ್ದು….ಅಲ್ವಾ..ನಿಮ್ಮ ಬೇನಾಮಿ ಆಸ್ತಿ ಪಾಕಿಸ್ತಾನವನ್ನು ಚೂಟೋದೂ ನೀವೇ ತೊಟ್ಟಿಲು ತೂಗೇದೂ ನೀವೇ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಲಾಡನ್ ನ ಹೊಡೆದಾಗ ನಿಮಗೆ ಈ ನ್ಯಾಯ ಅನ್ವಯವಾಗೋಲ್ವಾ ?
ಅವತ್ತು ಅಮೆರಿಕದೊಳಗೆ ನುಗ್ಗಿ ವರ್ಡ್ ಟ್ರೇಡ್ ಸೆಂಟರನ್ನು ಧ್ವಂಸ ಮಾಡಿದ್ದ ಅತ್ಯುಗ್ರ ಬಿನ್ ಲಾಡೆನ್ ಸಂಹಾರಕ್ಕೆ ಸಂಕಲ್ಪ ಮಾಡಿದ್ರು. ಪಾಕಿಸ್ತಾನ ಗಡಿಯ ಅಬೋಟಾಬಾದ್ ನಲ್ಲಿ ಬಿಂದಾಸಾಗಿದ್ದ ಲಾಡೆನನ್ನ ನಿಮ್ಮ ಬ್ಲ್ಯಾಕ್ ಹಾಕ್ ಕಮಾಂಡೋಗಳು ಹೆಕ್ಕಿ ತೆಗೆದು ಹೊಡೆದುರುಳಿಸಿದ್ರಾ ಆಗ ನಿಮಗೆ ನಿಮ್ಮ ಇವತ್ತಿನ ನ್ಯಾಯ ಅನ್ವಯವಾಗೋದಿಲ್ವಾ. ನಮ್ಮ ಮನೆಯೊಳಗೆ ನುಗ್ಗಿ ನಮ್ಮ ಹೆಣ್ಣುಮಕ್ಕಳ ಹಣೆಯ ಸಿಂಧೂರವನ್ನು ಕಿತ್ತುಕೊಂಡ ಉಗ್ರರನ್ನು ಸಂಹರಿಸೋಕೆ ಹೊರಟ್ರೆ ನಿಮಗೆ ಬಿಸಿ ನೀರು ಕಾಸಿದ ಹಾಗಾಗುತ್ತಲ್ವಾ. ಅವತ್ತು ಲಾಡೆನ್ ಕೊಂದ್ರೆ ನೀವು ಜಗತ್ತಿನ ಆದರ್ಶ ಪುರುಷ…. ಅದೇ ನಾವು ನಮ್ಮವರನ್ನು ಕೊಂದವರ ಹೆಡೆಮುರಿ ಕಟ್ಟಿದ್ರೆ ಅದು ಅನ್ಯಾಯವಾ. ಇವತ್ತು ಭಾರತದೊಟ್ಟಿಗೆ ವಹಿವಾಟು ಸಂಬಂಧವನ್ನು ನಿಲ್ಲಿಸಬೇಕಾಗುತ್ತೆ ಅನ್ನೋ ಧಮ್ಕಿ ಹಾಕಿ, ಯುದ್ಧ ನಿಲ್ಲಿಸಿದ್ದೀವಿ ಅಂತಿದೀರಲ್ಲಾ, ಅದೇ ಪಾಕಿಗಳನ್ನ ಕರೆದು ತೆಪ್ಪಗಿದ್ರೆ ಚೆಂದ ಇಲ್ಲದಿದ್ರೆ ನಿಮ್ಮ ಸಂಸ್ಕಾರಕ್ಕೆ ನಾವೇ ಗೋರಿ ತೋಡ್ತೀವಿ ಅಂದಿದ್ದಿದ್ರೆ ದೊಡ್ಡವರಾಗ್ತಿದ್ರಿ ಅಲ್ವಾ. ಅದೇನೋ ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ದಾಳಿಯನ್ನು ತಡೆದದ್ದು ನಾವೇ ಅಂತಾ ಬಡಾಯಿ ಕೊಚ್ಚಿಕೊಳ್ತಿದ್ದೀರಲ್ಲಾ ಪಾಕ್ ಹಾಗೆ ಮಾಡೋವರೆಗೂ ನಾವೇನು ಮಿಠಾಯಿ ತಿಂತಾ ಕೂರ್ತಿದ್ವಾ. ನಿಜಕ್ಕೂ ವಿಷಯ ಅದಲ್ಲ, ಪಾಕ್ ವಿರುದ್ಧದ ಸಮರಕ್ಕೂ ಮುನ್ನ ಈ ಸೋ ಕಾಲ್ಡ್ ಹಿರಿಯಣ್ಣನನ್ನ ಮೋದಿ ಕೇಳಲಿಲ್ವಲ್ಲಾ ಅನ್ನೋ ಉರಿ ಇವರಿಗೆ. ಅಮೆರಿಕದ ಉತ್ತರನ ಪೌರುಷವಂತೂ ಬಹಿರಂಗವಾಗಿದೆ. ಆದ್ರೆ ಯುದ್ಧ ಇಂದು ನಿಂತಿರಬಹುದು. ಆದ್ರೆ ನಮ್ಮ ತಂಟೆಗೆ ಬಂದ್ರೆ ಖೇಲ್ ಖತಂ ದುಕಾನ್ ಬಂದ್ ಅನ್ನೋದನ್ನ ಭಾರತ ಎದೆಯುಬ್ಬಿಸಿ ಹೇಳುತ್ತಿದೆ.