ಚಂಡೀಗಡ ನಗರದಲ್ಲಿ ಯುದ್ಧ ಗಂಟೆ ಮೊಳಗಿಸಲಾಗಿದೆ. ನೆರೆಯ ಪಾಕಿಸ್ತಾನದಿಂದ ವಾಯು ದಾಳಿ ಮುನ್ಸೂಚನೆ ಹಿನ್ನೆಲೆಯಲ್ಲಿ ಪಂಜಾಬ್ ನ ಚಂಡೀಗಡದಲ್ಲಿ ಸೈರನ್ ಮೊಳಗಿಸಲಾಗಿದೆ.
ನಗರದ ಏರ್ ಪೋರ್ಸ್ ಕೇಂದ್ರ ಕಚೇರಿ ಆದೇಶದ ಮೇರೆಗೆ ಈ ಸೈರನ್ ಸದ್ದು ಮಾಡಿದೆ. ಅಷ್ಟೇ ಅಲ್ಲಾ ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ. ಮುಂದಿನ ಆದೇಶದವರೆಗೂ ನಿವಾಸಿಗಳು ವಿನಾಕಾರಣ ಮನೆಯಿಂದ ಆಚೆ ಬಾರದಂತೆ ಸೂಚಿಸಲಾಗಿದೆ. ಭಾರತ-ಪಾಕಿಸ್ತಾನನಡುವೆ ಯುದ್ಧ ಆರಂಭವಾದ ಬೆನ್ನಲ್ಲೇ ಮೊದಲ ಬಾರಿಗೆ ಚಂಡೀಗಡದಲ್ಲಿ ಅಲರ್ಟ್ ಗಂಟೆ ಬಾರಿಸಿದೆ.
ಪಾಕಿಸ್ತಾನ ವಾಯುಪಡೆ ಪಂಜಾಬ್, ರಾಜಸ್ಥಾನ, ಗುಜರಾತ್, ಜಮ್ಮು-ಕಾಶ್ಮೀರವನ್ನು ಟಾರ್ಗೆಟ್ ಮಾಡೋ ಮುನ್ಸೂಚನೆ ಇದೆ. ಹೀಗಾಗಿಯೇ ಚಂಡೀಗಡದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.