ಇತಿಹಾಸವೇ ಹಾಗೆ….ಎಲ್ಲಿ, ಹೇಗೆ ನಿರ್ಮಾಣವಾಗಿ ಬಿಡುತ್ತೆ ಎನ್ನುವುದರ ಕಲ್ಪನೆಯೂ ಇರುವುದಿಲ್ಲ. ಇವತ್ತು ಹಿಂದೂಸ್ತಾನವೂ ಪಾಕ್ ವಿಚಾರದಲ್ಲಿ ಐತಿಹ್ಯ ಬರೆದಿದೆ. ಕೆಣಕಿದರೆ ಖತಂ ಎನ್ನುವ ಮಾತಿಗೆ ಬದ್ಧವಾಗಿ ಸಮರ ಸಾರಲಾಗಿದೆ. ಭಾರತ-ಪಾಕಿಸ್ತಾನ ನಡುವೆ ಅಧಿಕೃತವಾಗಿ ಯುದ್ಧ ಆರಂಭವಾಗಿದೆ. 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪಾಕ್ ರಾಜಧಾನಿ ಇಸ್ಲಾಮಾಬಾದ್ ಮೇಲೆ ಅಟ್ಯಾಕ್ ಮಾಡಲಾಗಿದೆ.
ಭಾರತವನ್ನು ಕೆಣಕಿ ಕೆಟ್ಟ ಪಾಪಿ ಪಾಕಿಸ್ತಾನ
ಇವತ್ತು ಪಾಕಿಸ್ತಾನದ ಈ ದುರ್ಗತಿಗೆ ಅದರ ಸ್ವಯಂ ಕೃತ ಅಪರಾಧಗಳೇ ನೇರ ಹೊಣೆ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ. ಪಹಲ್ಗಾಮ್ ಉಗ್ರರ ರಣಬೇಟೆಗಿಳಿದಿದ್ದ ಭಾರತ ಆಪರೇಷನ್ ಸಿಂಧೂರ್ ಅನ್ನು ಲಾಂಚ್ ಮಾಡಿತ್ತು. ಪಾಕ್ ಮತ್ತು ಪಾಕ್ ಆಕ್ರಮಿಕ ಕಾಶ್ಮೀರಗಳ ಉಗ್ರರ ಹೆಡ್ ಆಫೀಸ್ ಗಳನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು.
ಮಸೂದ್ ಅಜರ್ ನ ಸಹೋದರ ಸೇರಿ ಆತನ ಕುಟುಂಬದ 10 ಮಂದಿಯೊಟ್ಟಿಗೆ 100ಕ್ಕೂ ಹೆಚ್ಚು ಜಿಹಾದಿಗಳನ್ನು ಸಂಹರಿಸಲಾಗಿತ್ತು. ಆದರೆ ಸುಮ್ಮನೆ ಕೂರೋ ಜಾಯಮಾನವನ್ನ ಬಿಟ್ಟು ನಿಂತಿರುವ ಪಾಕ್ ಹಗಲು ರಾತ್ರಿ ಭಾರತದ ಪ್ರಮುಖ ನಗರಗಳನ್ನು ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿಗೆ ಮುಂದಾಯಿತು. ಅಷ್ಟೇ, ಆಪರೇಷನ್ ಸಿಂಧೂರ್ ಪಾರ್ಟ್ 2ಗೆ ಭಾರತ ಓಂಕಾರ ಹಾಡಿಬಿಟ್ಟಿತು.
ಭಾರತದ 15 ನಗರಗಳನ್ನು ಗುರಿಯಾಗಿಸಿ ದಾಳಿ
ಲಾಹೋರ್, ಕರಾಚಿ, ರಾವಲ್ಪಿಂಡಿಯಲ್ಲಿ ಸಿಡಿದ ಬಾಂಬ್
ಸ್ವತಂತ್ರ ಭಾರತದ ಅತಿ ದೊಡ್ಡ ಯುದ್ಧವೀಗ ಆರಂಭವಾಗಿದೆ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಪಾಕಿಗಳ ವಿರುದ್ಧ ಸಮರ ಸಾರಲಾಗಿದೆ. ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಭಾರತದ ರಾಜಸ್ಥಾನ, ಜಮ್ಮು, ಚಂಡೀಗಡಗಳ ಮೇಲೆ ಪಾಕ್ ಕ್ಷಿಪಣಿ ದಾಳಿಯ ವಿಫಲ ಯತ್ನ ನಡೆಸಿತು.
ಇದಕ್ಕೆ ಪ್ರತ್ಯುತ್ತರವಾಗಿ ಭಾರತವೂ ಪಾಕಿಸ್ಥಾನದ ಪ್ರಮುಖ ನಗರಗಳಾದ ಲಾಹೋರ್, ರಾವಲ್ಪಿಂಡಿ, ಕರಾಚಿ, ಇಸ್ಲಾಮಾಬಾದ್ ಗಳನ್ನು ಟಾರ್ಗೆಟ್ ಮಾಡಿ ಬಾಂಬ್ ಗಳ ಸುರಿಮಳೆಗೈದಿದೆ. ಈ ಮೂಲಕ ಸ್ವತಂತ್ರ ಭಾರತದ ಬಲುದೊಡ್ಡ ಸಂಗ್ರಾಮ ಪಾಕ್ ವಿರುದ್ಧ ಆರಂಭವಾದಂತಾಗಿದೆ.



















