ಆಪರೇಷನ್ ಸಿಂಧೂರ್ ನ ಯಶಸ್ಸನ್ನು ಜಗತ್ತಿನ ಮುಂದೆ ಅನಾವರಣಗೊಳಸಿದ ಕೀರ್ತಿ ಕರ್ನಲ್ ಸೋಫಿಯಾ ಖುರೇಶಿ ಅವರದ್ದು. ಮೂಲತ ಗುಜರಾತ್ ಮೂಲದ ಖುರೇಶಿ, ನಮ್ಮ ಕರ್ನಾಟಕದ ಸೊಸೆ ಅನ್ನೋದು ಈಗ ಪ್ರತಿ ಕನ್ನಡಿಗ ಹೆಮ್ಮೆ ಪಡುವಂತೆ ಮಾಡಿದೆ.
ಹೌದು, ನಿನ್ನೆ ಭಾರತೀಯ ಸೇನೆಯ ಯಶೋಗಾಥೆಯನ್ನು ಹಂಚಿಕೊಂಡ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ. ಯೆಸ್ ಸೇನೆಯ ಇಂಜಿನಿಯರಿಂಗ್ ವಿಭಾಗದಲ್ಲಿರುವ ತಾಜುದ್ದೀನ್ ಬಾಗೇವಾಡಿ ಮೂಲತ ಗೋಕಾಕದ ಕೊಣ್ಣೂರಿನವರು.
2015ರಲ್ಲಿ ಸೋಫಿಯಾ ಮತ್ತು ತಾಜುದ್ದೀನ್ ಪರಸ್ಪರ ಪ್ರೀತಿಸಿ ವಿವಾಹಬಂಧಕ್ಕೊಳಪಟ್ಟವರು. ಸದ್ಯ ತಾಜುದ್ದೀನ್ ಝಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕರ್ನಾಟಕದ ಸೊಸೆಯ ಈ ಸಾಧನೆಗೆ ಸಮಸ್ತ ಗೋಕಾಕದ ಕೊಣ್ಣೂರಿನ ಜನ ಸಂಭ್ರಮಾಚರಣೆ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.