ಗಿಚ್ಚಿಗಿಲಿಗಿ ಖ್ಯಾತಿಯ ನಟ ಚಂದ್ರಪ್ರಭ ಕನಸಿನ ಮನೆ ಕಟ್ಟಿಸಿದ್ದಾರೆ.
ಚಂದ್ರಪ್ರಭ ಐಷಾರಾಮಿ ಡ್ಯೂಪ್ಲೆಕ್ಸ್ ಮನೆ ಕಟ್ಟಿಸಿದ್ದು, ಗೃಹ ಪ್ರವೇಶದ ಫೋಟೋಗಳು ವೈರಲ್ ಆಗುತ್ತಿವೆ. ಉಪೇಂದ್ರ ನಟನೆಯ ಐಲವ್ಯೂ ಸೇರಿಂದಂತೆ ಅನೇಕ ಸಿನಿಮಾಗಳಲ್ಲಿ ಚಂದ್ರಪ್ರಭ ನಟಿಸಿದ್ದಾರೆ. ಹೆಚ್ಚಾಗಿ ಕಾಮಿಡಿ ಕಿಲಾಡಿಗಳು ಶೋ ಮೂಲಕ ಚಿರಪರಿಚಿತರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ‘ಮಜಾ ಟಾಕೀಸ್’ನಲ್ಲೂ ಚಂದ್ರಪ್ರಭ ಹಾಸ್ಯದ ಹೊಳೆ ಹರಿಸಿದ್ದಾರೆ.
ಈಗ ನಾಟಕ ಸೇರಿದಂತೆ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ನಿವಾಸಕ್ಕೆ ವೃಷಭ ಕುಟೀರ ಎಂದು ಹೆಸರಿಟ್ಟಿದ್ದಾರೆ. ಮಡದಿಯೊಂದಿಗೆ ಪೂಜೆಯಲ್ಲಿ ಚಂದ್ರಪ್ರಭ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.