ಬೆಂಗಳೂರು: ಐಶ್ವರ್ಯಗೌಡ ಮೇಲೆ ಇಡಿ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯಲ್ಲಿ 2.25 ಕೋಟಿ ರೂ. ಹಣ ಪತ್ತೆಯಾಗಿದೆ ಎನ್ನಲಾಗಿದೆ.
ಐಶ್ವರ್ಯಗೌಡಳಿಗೆ ಸಂಬಂಧಿಸಿದ 14 ಕಡೆ ಇಡಿ ದಾಳಿ ನಡೆಸಿತ್ತು. ಈ ವೇಳೆ 2 ಕೋಟಿ 25 ಲಕ್ಷ ರೂ. ನಗದು ಪತ್ತೆಯಾಗಿದೆ ಎನ್ನಲಾಗಿದೆ.
ಬೆಂಗಳೂರಿನ ಆರ್.ಆರ್.ನಗರದ ಗೊರಗುಂಟೆಪಾಳ್ಯ, ಡಾಲರ್ಸ್ ಕಾಲೋನಿ, ಮಂಡ್ಯ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಇಡಿ ದಾಳಿ ನಡೆಸಿತ್ತು. ಐಶ್ವರ್ಯಗೌಡ ಜೊತೆ ಹಣಕಾಸಿನ ವ್ಯವಹಾರದ ಶಂಕೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ನಿವಾಸದ ಮೇಲೆ ಕೂಡ ಇಡಿ ದಾಳಿ ನಡೆಸಿತ್ತು