ಬೆಂಗಳೂರು: ಗ್ರೇಟರ್ ಬೆಂಗಳೂರು ಯೋಜನೆಗೆ ರಾಜ್ಯಪಾಲರು ಅಸ್ತು ಎಂದಿದ್ದಾರೆ.
ಮಾರ್ಚ್ 25 ರಂದು ಮಸೂದೆಯಲ್ಲಿ ಕೆಲವು ವಿವರಣೆ ಕೇಳಿ ಗವರ್ನರ್ ಹಿಂದೆ ಕಳುಹಿಸಿದ್ದರು. ಏ. 24ಕ್ಕೆ ಬಿಲ್ ಅಂಗೀಕಾರ ಮಾಡಿ ಅಂಕಿತ ಹಾಕಿದ್ದಾರೆ. ಹೀಗಾಗಿ ಈಗ ಗ್ರೇಟರ್ ಬೆಂಗಳೂರು ಜಾರಿ ಯಾವಾಗ ಎಂಬ ಪ್ರಶ್ನೆ ಎದ್ದಿದೆ.
ಗ್ರೇಟರ್ ಬೆಂಗಳೂರು ಯೋಜನೆಯಲ್ಲಿ ಏನಿದೆ?
- ನಗರದಲ್ಲಿ ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾಗಲಿದೆ.
- ಬಿಬಿಎಂಪಿ ಗರಿಷ್ಠ 7 ಪಾಲಿಕೆಗಳಾಗಿ ವಿಭಜನೆಗೆ ಅಸ್ತು.
- ಒಂದೊಂದು ಪಾಲಿಕೆಗೂ ಒಬ್ಬೊಬ್ಬ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಆಗ್ತಾರೆ
- ಬೆಂಗಳೂರು ಗ್ರಾಮಾಂತರ, ರಾಮನಗರದ ಕೆಲವು ಹಳ್ಳಿಗಳು ಗ್ರೇಟರ್ ಬೆಂಗಳೂರು ಸೇರಲಿದೆ.
- ಬಿಲ್ ಜಾರಿ ಆದ ಮೇಲೆ ಆ ಪ್ರದೇಶದ ನಗರ ಪಾಲಿಕೆ, ಗ್ರಾಮ ಪಂಚಾಯತಿಗಳು ರದ್ದು.
- ಮೇಯರ್ ಕಾಲಾವಧಿ 30 ತಿಂಗಳು.
- ಪ್ರತಿ ಪಾಲಿಕೆಯಲ್ಲೂ 100-200 ವಾರ್ಡ್ ಗಳು ಸೃಷ್ಟಿಯಾಗಬಹುದು.
-ಸದಸ್ಯರ ಅಧಿಕಾರವಧಿ 5 ವರ್ಷಕ್ಕೆ ನಿಗದಿ
-ಪ್ರತಿ ನಗರ ಪಾಲಿಕೆಗೆ ಬೆಂಗಳೂರಿನ ಹೆಸರಿನಿಂದಲೇ ಶೀರ್ಷಿಕೆ - ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರು
-ಉಪಮುಖ್ಯಮಂತ್ರಿ ಉಪಾಧ್ಯಕ್ಷ ಆಗಿರ್ತಾರೆ. - ಬೆಂಗಳೂರು ಶಾಸಕರು, ಗೃಹ, ನಗರಾಭಿವೃದ್ಧಿ, ಸಾರಿಗೆ, ಇಂಧನ ಸಚಿವರು, ಮುಖ್ಯ ಆಯುಕ್ತರು, ಪಾಲಿಕೆಗಳ ಮೇಯರ್ ಗಳು, ಬಿಡಿಎ, ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ, ಬಿಎಂಆರ್ಸಿಎಲ್, ನಗರ ಪೊಲೀಸ್ ಕಮೀಷನರ್ ಪ್ರಾಧಿಕಾರ ಸಮಿತಿಯ ಸದಸ್ಯರಾಗಿ ಇರುತ್ತಾರೆ ಎನ್ನಲಾಗಿದೆ. ಮಾರ್ಚ್ 13 ರಂದು ಸದನದಲ್ಲಿ ಗ್ರೇಟರ್ ಬೆಂಗಳೂರು ಬಿಲ್ ಅಂಗೀಕಾರಗೊಂಡಿದ್ದು, ಮಾರ್ಚ್. 17ಕ್ಕೆ ರಾಜಭವನಕ್ಕೆ ಕಳುಹಿಸಲಾಗಿತ್ತು.ಮಾರ್ಚ್ 25 ರಂದು ಹೆಚ್ಚಿನ ವಿವರಣೆ ಕೇಳಿ ರಾಜ್ಯಪಾಲರು ಹಿಂದೆ ಕಳುಹಿಸಿದ್ದರು. ಮತ್ತೊಮ್ಮೆ ಸ್ಪಷ್ಟನೆ ನೀಡಿ ಕಳುಹಿಸಿದ್ದ ಮಸೂದೆ ಈಗ ಅಂಗೀಕಾರವಾಗಿದೆ. ವಿರೋಧಗಳ ನಡುವೆಯೂ ಗ್ರೇಟರ್ ಬೆಂಗಳೂರು ಅಂಗೀಕಾರಗೊಂಡಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಗ್ರೇಟರ್ ಬೆಂಗಳೂರು ವಿರೋಧ ಮಾಡಿದ್ದವು.