ಶ್ರೀನಗರ: ಜಮ್ಮುಕಾಶ್ಮೀರದ (jammu And kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿ (Tourists Attack) ಗೆ ಮತ್ತೋರ್ವ ಕನ್ನಡಿಗ ಬಲಿಯಾಗಿರುವ ಘಟನೆ ನಡೆದಿದೆ.
ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸಾವಿನ ಬೆನ್ನಲ್ಲೇ ಇದೀಗ ಬೆಂಗಳೂರಿನ ಭರತ್ ಭೂಷಣ್ ಎನ್ನುವರು ಸಹ ಉಗ್ರರ ದಾಳಿಯಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್ನಲ್ಲಿ ಟಿಆರ್ಎಫ್(The Resistance Front Terror) ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸಾವನ್ನಪ್ಪಿದಂತಾಗಿದೆ. ಕರ್ನಾಟಕದಿಂದ ಅಧಿಕಾರಿಗಳು ಹಾಗೂ ಪೊಲೀಸರು ಸಹ ಕಾಶ್ಮೀರದತ್ತ ಹೊರಟ್ಟಿದ್ದಾರೆ. ಉಗ್ರರ ಗುಂಡಿಗೆ ಬಲಿಯಾಗಿರುವ ಬೆಂಗಳೂರು ನಿವಾಸಿ ಭರತ್ ಭೂಷಣ್, ಪ್ರಕಾಶ್ ಕೋಳಿವಾಡ ತಂಗಿಯ ಗಂಡನ ಸ್ನೇಹಿತ ಎನ್ನಲಾಗಿದೆ. ಕೋಳಿವಾಡ ಕುಟುಂಬ ಸಹ ಭರತ್ ಭೂಷಣ್ ಮೃತ ದೇಹ ತರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದೆ.
ದಾಳಿ ಬೆನ್ನಲ್ಲೇ ಮೊದಲಿಗೆ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸಾವು ಸುದ್ದಿ ಬರುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಸಭೆ ನಡೆಸಿದ್ದು, ಪಹಲ್ಗಾಮ್ ಇನ್ನೆಷ್ಟು ಕನ್ನಡಿಗರು ಸಿಲುಕಿದ್ದಾರೆ ಎನ್ನುವ ಮಾಹಿತಿ ಪಡೆದು ರಕ್ಷಣೆಗೆ ನೆರವಾಗಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.


















