ನಮ್ಮ ದೇಹದಲ್ಲಿ ಉಪ್ಪಿನ ಅಂಶ ಹೆಚ್ಚಾದಾಗ ದೇಹದಲ್ಲಿ ಬದಲಾವಣೆಗಳು ಆಗಲು ಪ್ರಾರಂಭವಾಗುತ್ತದೆ. ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಕಂಡುಬರುವಂತಹ ಬೊಜ್ಜಿನಿಂದ ನಮಗೆ ಕಿರಿ ಕಿರಿಯ ಅನುಭವ ಆಗುತ್ತದೆ. ಹೀಗಾಗಿ ನಮ್ಮ ಆರೋಗ್ಯವನ್ನು ಬೊಜ್ಜಿನಿಂದ ಕಾಪಾಡಿಕೊಳ್ಳಲು ಕೆಲವೊಂದು ಸರಳ ಉಪಾಯಗಳನ್ನು ನಾವು ಗಮನಿಸಬೇಕು. ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.
ಬೊಜ್ಜಿನ ಸಮಸ್ಯೆ ಬಹುತೇಕ ಯುವಕ- ಯುವತಿಯರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಅದರಲ್ಲೂ ಹೊಟ್ಟೆಯ ಭಾಗದಲ್ಲಿನ ಕೊಬ್ಬು ಮಹಿಳೆಯರ, ಪುರುಷರ ಅಂದವನ್ನೇ ಹಾಳು ಮಾಡುತ್ತಿದೆ. ಕೆಲವರಿಗೆ ತೂಕ ಸುಲಭವಾಗಿ ಹೆಚ್ಚುತ್ತದೆ. ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಕಾಡಲಾರಂಭಿಸುತ್ತದೆ. ಅಂಥವರು ತೂಕ ಇಳಿಸಿಕೊಳ್ಳಬೇಕೆಂದರೆ ಅದು ಬಹಳ ಕಷ್ಟ. ಏನೆಲ್ಲಾ ಪ್ರಯತ್ನಿಸಿದರೂ ದೇಹದಲ್ಲಿನ ಕೊಬ್ಬು ಇಳಿಯೋದೇ ಇಲ್ಲ. ಕೈ ತೋಳಿನ ಬೊಜ್ಜು ಸೌಂದರ್ಯ ಕೆಡಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಹದಲ್ಲಿ ಅತಿಯಾಗಿ ಬೊಜ್ಜು ಇದ್ದರೂ ಅದು ತೋಳಿನಲ್ಲೂ ಕಾಣಿಸಿಕೊಳ್ಳುವುದು. ತೋಳಿನ ಕೊಬ್ಬು ತುಂಬಾ ಹಠಮಾರಿ ಆಗಿರುವುದು. ಇದನ್ನು ಕರಗಿಸಲು ತುಂಬಾ ಶ್ರಮ ವಹಿಸಬೇಕಾಗುತ್ತದೆ.
ಸಕ್ಕರೆ ಅಂಶದಿಂದಾಗಿ ದೇಹದಲ್ಲಿ ಕೊಬ್ಬು ಹೆಚ್ಚಾಗುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಸೋಡಾ, ಕೇಕ್ ಮತ್ತು ಇತ್ಯಾದಿ ಬೇಕರಿ ತಿನಿಸುಗಳಲ್ಲಿ ಸಕ್ಕರೆ ಅಂಶವು ಇರುವುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಕ್ಕರೆಯು ಕೆಟ್ಟದಲ್ಲ, ಆದರೆ ತೋಳಿನ ಕೊಬ್ಬು ಇಳಿಸಿಕೊಳ್ಳಲು ಸಕ್ಕರೆ ಸೇವನೆ ಕಡಿಮೆ ಮಾಡಿಕೊಳ್ಳಲೇಬೇಕು. ಕಾಫಿ, ಚಾ ಇತ್ಯಾದಿಗಳಿಗೆ ಹಾಕುವ ಸಕ್ಕರೆ ಕಡಿಮೆ ಮಾಡಿ. ಜ್ಯೂಸ್ ಗಳಿಗೆ ಸಕ್ಕರೆ ಹಾಕದೆ ಕುಡಿಯಿರಿ. ಪ್ಯಾಕ್ ಆಗಿರುವ ಜ್ಯೂಸ್ ನ್ನು ಕುಡಿಯಬೇಡಿ. ತಾಜಾ ಹಣ್ಣಿನ ಜ್ಯೂಸ್ ನೀವೇ ತಯಾರಿಸಿಕೊಂಡು ಕುಡಿಯಿರಿ. ಓಟ್ಸ್ ಮತ್ತು ಇತರ ತಾಜಾ ಹಣ್ಣುಗಳನ್ನು ಸಿಹಿ ಬದಲಿಗೆ ತಿನ್ನಿರಿ.