ಬೆಂಗಳೂರು: ಇಲ್ಲಿನ ಯಶವಂತಪುರ ಫ್ಲೈ ಓವರ್ ಬಳಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ.
ಮಾರಪ್ಪನ ಪಾಳ್ಯದಿಂದ ಯಲಹಂಕ ಕಡೆ ಹೋಗುತ್ತಿದ್ದ ಕಾರು, ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಕಾರಿನಲ್ಲಿ ವಯಸ್ಸಾದ ದಂಪತಿಗಳು ಇದ್ದರು ಎನ್ನಲಾಗಿದೆ.
ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಯಶವಂತಪುರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















