ಪ್ರಯಾಣ ಎಂದರೆ ಆ ರಸ್ತೆಯಲ್ಲಿ ಅತಿಯಾದ ತಿರುವುಗಳಿರಬಾರದು. ಸಾಧ್ಯವಾದಷ್ಟು ರಸ್ತೆ ನೇರವಾಗಿದ್ದರೆ. ಅಬ್ಬಾ ಎಷ್ಟು ಸಲೀಸು ಪ್ರಯಾಣ ಅಂತೀರಲ್ವಾ? ಹಾಗಿದ್ದರೆ, ನಿಜಕ್ಕೂ ತಿರುವುಗಳೇ ಇಲ್ಲದ…ಅತ್ಯಂತ ನೇರವಾದ ರಸ್ತೆ ಜಗತ್ತಿನಲ್ಲಿ ಇದೆಯಾ? ಆ ಪ್ರಶ್ನೆಗೆ ಇಲ್ಲೊಂದು ಉತ್ತರ ಸಿಕ್ಕಿದೆ.
ಯೆಸ್! ನಿಮ್ಮ ಪ್ರಶ್ನೆಗೀಗ ಪಕ್ಕಾ ಉತ್ತರ ಸಿಕ್ಕಿದೆ. ಪ್ಯಾನ್ ಅಮೆರಿಕ ರಸ್ತೆ ವಿಶ್ವದಲ್ಲೇ ಮೊದಲ ತಿರುವುಗಳೇ ಇಲ್ಲದ ರಸ್ತೆ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ವಿಶೇಷ ಅಂದ್ರೆ ಒಂದು ರಸ್ತೆ ತಿರುವುಗಳೇ ಇಲ್ಲದೆ, ನೇರವಾಗಿ ಎಷ್ಟು ಕಿಲೋಮೀಟರ್ ಇರಬಹುದು.? ಅಬ್ಬಬ್ಬಾ ಅಂದ್ರೆ 10 ಬೇಡಾ 20 ಕಿಲೋಮೀಟರ್ ಇರಬಹುದು ಅನ್ನೋದು ನಿಮ್ಮ ಉತ್ತರವಾಗಿರಬಹುದು. ಬಟ್ ಅಮೆರಿಕದ ಈ ಪ್ಯಾನ್ ಹೈವೇ ಬರೋಬ್ಬರಿ 30 ಸಾವಿರ ಕಿಲೋಮೀಟರ್ ಲಂಬವಾಗಿ ಸಾಗುತ್ತದೆ.
14 ದೇಶಗಳನ್ನು ಹಾದು ಹೋಗುತ್ತೆ ಪ್ಯಾನ್ ಹೈವೇ!
ಉತ್ತರ ಮತ್ತು ದಕ್ಷಿಣ ಅಮೆರಿಕವನ್ನು ಬೆಸೆಯುವ ಈ ದೈತ್ಯ ಲಂಬವಾದ ಹೈವೇ 14 ದೇಶಗಳನ್ನು ಹಾದು ಹೋಗುವುದು ವಿಶೇಷ. ಕೆನಡಾ, ಕೊಲಂಬಿಯಾ, ಮೆಕ್ಸಿಕೋ, ಪೆರು, ಗ್ವಾಟಿಮಾಲಾ ಮೂಲಕ ಈ ಹೆದ್ದಾರಿ ಸಾಗುತ್ತದೆ. ಇನ್ನು ತಿರುವುಗಳೇ ಇಲ್ಲದ ಈ ರಸ್ತೆಯನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಲು ಎರಡು ತಿಂಗಳು ಬೇಕು. ಅಂದರೆ, 60 ದಿನಗಳ ನಿರಂತರ ಪ್ರಯಾಣದ ಅವಶ್ಯಕತೆ ಇದೆ. ನಿತ್ಯವೂ ದೊಡ್ಡ ವಿಶ್ರಾಂತಿ ಇಲ್ಲದೆ 500 ಕಿಲೋಮೀಟರ್ ಸಾಗಿದರೆ, 30 ಸಾವಿರ ಕಿಲೋಮೀಟರ್ ನ ಈ ರಸ್ತೆಯನ್ನು ಕ್ರಮಿಸಿ ಬಿಡಬಹುದು. ನಿಜಕ್ಕೂ ಜಗತ್ತಿನ ಮಾನವ ನಿರ್ಮಿತ ಅದ್ಭುತಗಳಲ್ಲಿ ಈ ರಸ್ತೆಗೂ ಶ್ರೇಯ ಸಿಕ್ಕಿದೆ.