ಭಾರತ ವಿಸ್ತಾರವಾದ ಹಾಗೂ ಜ್ಞಾನವಂತ ಮನುಷ್ಯರನ್ನು ಹೊಂದಿರುವ ದೇಶ. ಹೀಗಾಗಿ ಜಗತ್ತಿನ ಮೂಲೆ ಮೂಲೆಯಲ್ಲೂ ಭಾರತೀಯರು ಕಾಣಸಿಗುತ್ತಾರೆ. ಬಹುತೇಕ ರಾಷ್ಟ್ರಗಳಲ್ಲಿ ಭಾರತೀಯ ಮೂಲದವರಿದ್ದಾರೆ. ಅಲ್ಲಿ ಉನ್ನತ ಹುದ್ದೆ, ಉನ್ನತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ರಾಷ್ಟ್ರಗಳಲ್ಲಿ ಮಾತ್ರ ಭಾರತೀಯರಿಲ್ಲ. ಆ ರಾಷ್ಟ್ರಗಳ ಬಗ್ಗೆ ನಿಮಗೆ ಹೇಳುತ್ತಿದ್ದೇವೆ ನೋಡಿ….
ಭಾರತೀಯರು ಬರೋಬ್ಬರಿ ವಿಶ್ವದ 195 ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತೀಯರು ಇಷ್ಟೊಂದು ದೇಶದಲ್ಲಿ ವಾಸಿಸುತ್ತಿದ್ದರೂ ಕೆಲವು ದೇಶಗಳಲ್ಲಿ ಮಾತ್ರ ವಾಸಿಸುತ್ತಿಲ್ಲ. ವಿಶ್ವದ ಅತ್ಯಂತ ಚಿಕ್ಕ ಸಿಟಿ ವ್ಯಾಟಿಕನ್ ಸಿಟಿ. ಸುಮಾರು 121 ಎಕರೆ ಪ್ರದೇಶವನ್ನು ಹೊಂದಿರುವ ಈ ದೇಶದಲ್ಲಿ ಸಾವಿರಕ್ಕಿಂತ ಕಡಿಮೆ ಜನರು ವಾಸಿಸುತ್ತಿದ್ದಾರೆ. ಲಾರ್ಡ್ ಪೋಪ್ ವಾಸಿಸುವ ಇಲ್ಲಿ ಭಾರತೀಯರು ಮಾತ್ರ ವಾಸಿಸುತ್ತಿಲ್ಲ.
ಯುರೋಪ್ ನಲ್ಲಿನ ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿರುವ ಸ್ಯಾನ್ ಮರಿನೋ ದೇಶದಲ್ಲಿ ಕೂಡ ಭಾರತೀಯರು ಇಲ್ಲ. ಈ ದೇಶವು ತುಂಬಾ ಹಳೆಯ ಗಣರಾಜ್ಯವಾಗಿದೆ. 33,642 ಜನರಿರುವ ಈ ದೇಶದಲ್ಲಿ ಭಾರತೀಯರು ಇಲ್ಲ.
ಬಲ್ಗೇರಿಯಾ ಆಗ್ನೇಯ ಯುರೋಪ್ ನಲ್ಲಿರುವ ದೇಶದಲ್ಲಿ ಕೂಡ ಭಾರತೀಯರು ಇಲ್ಲ. ಆಸ್ಟ್ರೇಲಿಯಾದ ಈಶಾನ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಎಲ್ಲಿಸ್ ದ್ವೀಪಗಳಲ್ಲಿ 10 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ದ್ವೀಪವು ಕೇವಲ 8 ಕಿಲೋಮೀಟರ್ ರಸ್ತೆ ಹೊಂದಿದ್ದು, ಇಲ್ಲಿ ಕೂಡ ಭಾರತೀಯರು ಇಲ್ಲ.
ಭಾರತದ ನೆರೆಯ ಪಾಕಿಸ್ತಾನದಲ್ಲೂ ಭಾರತೀಯರು ಇಲ್ಲ. ಭಾರತದ ಬದ್ಧ ವೈರಿ ರಾಷ್ಟ್ರವಾಗಿರುವುದರಿಂದಾಗಿ ಭಾರತೀಯರು ಅಲ್ಲಿ ವಾಸಿಸುತ್ತಿಲ್ಲ.