ಬೆಂಗಳೂರು : ನಗರದ ಕೋರಮಂಗಲದಲ್ಲಿ ಇಬ್ಬರು ಯುವತಿಯರು ಯುವಕನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಎದುರಲ್ಲೇ ಈ ಘಟನೆ ನಡೆದಿದ್ದು, ಹೊಡೆಯಬೇಡಿ ಎಂದು ತಡೆಯಲು ಪ್ರಯತ್ನಿಸಿದರೂ ಯುವತಿಯರು ಹಲ್ಲೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಸಮಸ್ಯೆ ಇದ್ದರೆ ಠಾಣೆಗೆ ತೆರಳಿ ದೂರು ನೀಡಿ, ರಸ್ತೆಯಲ್ಲಿ ಗಲಾಟೆ ಮಾಡಬೇಡಿ ಎಂದು ಪೊಲೀಸರು ಸೂಚನೆ ನೀಡಿದರೂ, ಎರಡೂ ಕಡೆಯವರು ದೂರು ನೀಡಲು ಮುಂದೆ ಬಂದಿಲ್ಲ. ಪಬ್ ಒಳಗೆ ಯುವತಿಯರಿಗೆ ಯುವಕ ಕಿರಿಕಿರಿ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ, ವೈರಲ್ ಆಗಿರುವ ವಿಡಿಯೋ ಆಧರಿಸಿ ಪೊಲೀಸರು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ತಮಿಳುನಾಡಲ್ಲಿ ದಾಖಲೆಯ ಮತದಾನ, ಡಿಎಂಕೆಗೆ ನಡುಕ? ಇತಿಹಾಸ ಮರುಕಳಿಸಿದರೆ ಆಡಳಿತ ಬದಲಾವಣೆ ಪಕ್ಕಾ!



















