ಬೆಂಗಳೂರು: ನೀವೇನಾದರೂ ಉಪನ್ಯಾಸಕರಾಗಬೇಕು ಎಂದು ಬಯಸುತ್ತಿದ್ದರೆ, ತುಮಕೂರು ವಿಶ್ವವಿದ್ಯಾಲಯವು ಸುವರ್ಣಾವಕಾಶ ನೀಡಿದೆ. ಹೌದು, ತುಮಕೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 2 ಅತಿಥಿ ಉಪನ್ಯಾಸಕರ ನೇಮಕಾತಿಗೆ (TumkurUniversity Guest Lecturer Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮೂಲಕ ಉದ್ಯೋಗ ಪಡೆಯಬಹುದು. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ತುಮಕೂರು ವಿಶ್ವವಿದ್ಯಾಲಯ, ತುಮಕೂರು
ಹುದ್ದೆ ಹೆಸರು: ಅತಿಥಿ ಉಪನ್ಯಾಸಕರು
ಒಟ್ಟು ಹುದ್ದೆ: 2
ಉದ್ಯೋಗ ಸ್ಥಳ: ತುಮಕೂರು
ಸಂದರ್ಶನ ನಡೆಯುವ ದಿನಾಂಕ: ನವೆಂಬರ್ 16
ಅರ್ಹ ವಿದ್ಯಾರ್ಹತೆಯ ಜತೆಗೆ ಪಿಎಚ್.ಡಿ, ನೆಟ್, ಸೆಟ್ ಮುಗಿಸಿದವರು ಸಂದರ್ಶನಕ್ಕೆ ಹಾಜರಾಗಲು ಅರ್ಹರು. ಮಧುಗಿರಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ತುಮಕೂರು ವಿವಿಯ ಎಲ್.ಎಲ್.ಎಂ ವಿಭಾಗದಲ್ಲಿ ಖಾಲಿ ಇರುವ ತಲಾ ಒಂದು ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ವಿವಿಯ ಎಲ್.ಎಲ್.ಎಂ ವಿಭಾಗದಲ್ಲಿ ಉದ್ಯೋಗ ಪಡೆಯಲು ಬಯಸಿರುವವರು ಕಡ್ಡಾಯವಾಗಿ ಎಲ್.ಎಲ್.ಎಂ ಮುಗಿಸಿರಬೇಕು ಎಂದು ತಿಳಿಸಲಾಗಿದೆ
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ tumkuruniversity.ac.inRecruitment ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆಯನ್ನು ಓದಬೇಕು
ಅಧಿಸೂಚನೆಯಲ್ಲಿ ತಿಳಿಸಿದ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಬೇಕು
ಈ ಕೆಳಗಿನ ವಿಳಾಸದಲ್ಲಿ ನಡೆಯುವ ಸಂದರ್ಶನಕ್ಕೆ ದಾಖಲೆಗಳೊಂದಿಗೆ ಹಾಜರಾಗಬೇಕು
ಸಂದರ್ಶನ ನಡೆಯುವ ಸ್ಥಳ
ಕುಲಪತಿಗಳ ಚೇಂಬರ್, ತುಮಕೂರು ವಿಶ್ವವಿದ್ಯಾನಿಲಯ, ಬಿ.ಎಚ್. ರಸ್ತೆ, ತುಮಕೂರು. ಬೆಳಗ್ಗೆ 9.30ರಿಂದಲೇ ಸಂದರ್ಶನ ಆರಂಭವಾಗಲಿದೆ ಎಂದು ಸಂದರ್ಶನದಲ್ಲಿ ತಿಳಿಸಲಾಗಿದೆ.


















