ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ 30,06,000 ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಎಲ್ಲಾ ಮೂಲಗಳಿಂದ ಒಟ್ಟು 29,55,27,852 ರೂಪಾಯಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 4 ಕೋಟಿ ರೂಪಾಯಿ ಹೆಚ್ಚಿನ ಆದಾಯ ಬಂದಿದೆ.
1,000 ರೂಪಾಯಿ ಮತ್ತು 300 ರೂಪಾಯಿ ಟಿಕೆಟ್, ಲಾಡು ಮಾರಾಟ ಹಾಗೂ ಇ-ಹುಂಡಿಯಿಂದ ಒಟ್ಟು 25.82 ಕೋಟಿ ರೂ. ಸಂಗ್ರಹವಾಗಿದೆ. ಹುಂಡಿ ಕಾಣಿಕೆ ರೂಪದಲ್ಲಿ 3.71 ಕೋಟಿ ರೂ., 43.170 ಗ್ರಾಂ ಚಿನ್ನ ಹಾಗೂ 1.255 ಕೆಜಿ ಬೆಳ್ಳಿ ಸಿಕ್ಕಿದೆ. ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 18,99,100 ರೂಪಾಯಿ ಸಂಗ್ರಹವಾಗಿದೆ.


















