ನರೇಂದ್ರ ಮೋದಿಯವರು ಇಂದು ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ನೂತನವಾಗಿ 100 ಕಿಲೋಮೀಟರ್ಗೂ ಅಧಿಕ ಮೆಟ್ರೋ ಮಾರ್ಗ ವಿಸ್ತರಣೆಗೊಳ್ಳಲಿದೆ.
ಮಂಗಳೂರಿನಲ್ಲಿ 850 ಕೋಟಿ ರೂಪಾಯಿ ವೆಚ್ಚದ, 80 ಸಾವಿರ ಟನ್ ಸಾಮರ್ಥ್ಯದ ದೇಶದಲ್ಲೇ ಅತಿ ದೊಡ್ಡ ಅಂಡರ್ಗ್ರೌಂಡ್ ಎಲ್ಪಿಜಿ ಸಂಗ್ರಹಾರ ಆರಂಭಗೊಳ್ಳಲಿದೆ. ಮೈಸೂರಲ್ಲಿ ರಾಜ್ಯದ ಮೊದಲ ಟೆಲ್ಟೆಡ್ ಎಲ್ಇಡಿ ತಾರಾಲಯ ಉದ್ಘಾಟನೆಗೊಳ್ಳಲಿದೆ.
ರಾಜಧಾನಿಯನ್ನು ಕರಾವಳಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಬೆಂಗಳೂರು-ಮಂಗಳೂರು ಹಾಗೂ ಗೋವಾ ಮಡಗಾಂವ್ ನಡುವೆ ನೂತನ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ.
















