ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪರಿಷ್ಕೃತ ದರ ಪ್ರಕಟಿಸುವುದಾಗಿ ಹೇಳಿದ್ದ ಬಿಎಂಆರ್ ಸಿಎಲ್ ಈಗ ಪರಿಷ್ಕೃತ ದರ ಪ್ರಕಟಿಸಿದೆ. ಆದರೆ, ದರ ಇಳಿಕೆ ಮಾಡಿಲ್ಲ. ಬದಲಾಗಿ ಕೆಲವು ಸ್ಟೇಜ್ ಗಳಲ್ಲಿ ದರ ಕಡಿಮೆ ಮಾಡಿದೆ.
ಟಿಕೆಟ್ ನ ಕನಿಷ್ಠ ದರ 10 ರೂ., ಗರಿಷ್ಠ ದರ 90 ರೂ ಇರುವುದರಲ್ಲಿ ಯಾವುದೇ ಬದಲವಾಣೆ ಮಾಡಿಲ್ಲ. ಆದರೆ, ಸ್ವಲ್ಪ ದರ ಇಳಿಕೆ ಮಾಡಿರುವ ಮೆಟ್ರೋ ಪ್ರಯಾಣಿಕರ ಮೂಗಿಗೆ ತುಪ್ಪ ಸವರಿದೆ.
ದರ ಏರಿಕೆ ಮಾಡುವ ಸಂದರ್ಭದಲ್ಲಿ ಶೇ. 46ರಿಂದ 50ರಷ್ಟು ಹೆಚ್ಚಳ ಮಾಡುವುದಾಗಿ ಹೇಳಿದ್ದ ಬಿಎಂಆರ್ ಸಿಎಲ್ ಶೇ. 100 ರಿಂದ ಶೇ. 105ರಷ್ಟು ಹೆಚ್ಚಳ ಮಾಡಿದೆ. ಈಗ ಇದರಲ್ಲಿ ಶೇ. 30ರಷ್ಟು ಇಳಿಕೆ ಮಾಡಿದೆ. ಯದ್ವಾತದ್ವಾ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಇಳಿಕೆ ಕಂಡಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದ ಬಿಎಂಆರ್ ಸಿಎಲ್ ಪರಿಷ್ಕೃತ ದರದ ನೆಪದಲ್ಲಿ ಸೆಳೆಯಲು ಮುಂದಾಗಿದೆ. ಆದರೆ, ಪರಿಷ್ಕೃತ ಮಾಡದೆ ಜನರನ್ನೇ ಯಾಮಾರಿಸಲು ಮುಂದಾಗಿದೆ ಎಂದು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಮೆಟ್ರೋ ದರ ಇಳಿಕೆ ಎಷ್ಟು?
ಶೇ. 100ರಿಂದ 90ರಷ್ಟು ಹೆಚ್ಚಳ ಆಗಿರುವ ಕಡೆಗೆ ನಮ್ಮ ಮೆಟ್ರೋ ದರ ಇಳಿಕೆ ಮಾಡಿದೆ. ಶೇ. 100ರಷ್ಟು ಹೆಚ್ಚಳ ಮಾಡಿರುವ ಪ್ರದೇಶದ ಕಡೆ 10 ರೂ. ಇಳಿಕೆ ಮಾಡಿದೆ. ಯಾವ ಆಧಾರದ ಮೇಲೆ ದರ ಇಳಿಕೆ ಮಾಡಿದೆ ಎನ್ನುವುದು ಮಾತ್ರ ಸ್ಪಷ್ಟಪಡಿಸಿಲ್ಲ. ಕೆಲವು ಬಾಗಗಳಲ್ಲಿ ಮಾತ್ರ ಬಿಎಂಆರ್ ಸಿಎಲ್ 10 ರೂ. ಇಳಿಕೆ ಮಾಡಿದೆ.
ನಿನ್ನೆ ಹಾಗೂ ಇಂದಿನ ದರ ಪಟ್ಟಿಯ ವಿವರ
- ರಾಜಾಜಿನಗರದಿಂದ ಲಾಲ್ ಬಾಗ್
ಹಿಂದಿನ ದರ : ₹50
ಇಂದಿನ ದರ : ₹40 - ಪೀಣ್ಯ-ಸೆಂಟ್ರಲ್ ಕಾಲೇಜು
ಹಿಂದಿನ ದರ : ₹60
ಇಂದಿನ ದರ : ₹50
3.ಗರುಡಚಾರ್ ಪಾಳ್ಯ-ಎಂ.ಜಿ ರೋಡ್
ಹಿಂದಿನ ದರ : ₹60
ಇಂದಿನ ದರ : ₹50 - ಮೈಸೂರು ರೋಡ್-ಇಂದಿರಾ ನಗರ
ಹಿಂದಿನ ದರ : ₹70
ಇಂದಿನ ದರ : ₹60
5.ಕಬ್ಬನ್ ಪಾರ್ಕ್-ಬೆನ್ನಿಗನಹಳ್ಳ
ಹಿಂದಿನ ದರ : ₹50
ಇಂದಿನ ದರ : ₹40
6.ಸ್ಯಾಂಡಲ್ ಸೋಪ್-ಬೈಯಪ್ಪನಹಳ್ಳಿ
ಹಿಂದಿನ ದರ : ₹70
ಇಂದಿನ ದರ : ₹60



















