ಬೆಳಗಾವಿ : ಯಾರೆ ಎಷ್ಟೆ ದೊಡ್ಡವರು ಇದ್ದರೂ ಕಾನೂನಿಗೆ ಎಲ್ಲರಿಗೂ ಒಂದೇ. ನ್ಯಾಯಾಲಯ ನೀಡಿದ ತೀರ್ಪಿಗೆ ನಾವು ತಲೆ ಬಾಗಲೆ ಬೇಕಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಶಾಸಕ ವಿನಯ್ ಕುಲಕರ್ಣಿ ಕೋರ್ಟ್ ತೀರ್ಪು ಪ್ರಕಟ ವಿಚಾರವಾಗಿ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕೋರ್ಟಿನಲ್ಲಿ ಬಂದಿರುವ ತೀರ್ಪಿನ ಬಗ್ಗೆ ನಾವು ಚರ್ಚೆ ಮಾಡುವುದು ಸೂಕ್ತವಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಆ ತೀರ್ಪಿಗೆ ನಾವು ತಲೆ ಬಾಗಲೆ ಬೇಕಾಗುತ್ತದೆ. ಅದರ ಬಗ್ಗೆ ನಾವು ಚರ್ಚೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಇಲ್ಲದೇ ರಾಜ್ಯದಲ್ಲಿ ನಿತ್ಯ ಕಣ್ಣೀರಿನ ಕಥೆಯಾಗಿದೆ : ವಾಟಾಳ್ ನಾಗರಾಜ್



















