ಉಡುಪಿ: ಜಿಲ್ಲೆಯಲ್ಲಿ ಕಳೆದ ಶಕ್ರವಾರ ಹಾಸನ ಮೂಲದ ಇಬ್ಬರು ಯುವಕರು ಪ್ರವಾಸಕ್ಕೆ ಬಂದ ವೇಳೆಯಲ್ಲಿ ಕಡಲಬ್ಬರಕ್ಕೆ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿತ್ತು.
ಇದೀಗ ಸ್ಥಳೀಯರು ಯುವಕರ ಸಾವಿಗೆ ಜಿಲ್ಲಾಡಳಿತದ ಅವ್ಯವಸ್ಥೆಯೇ ಕಾರಣ ಎಂದು ಕಿಡಿಕಾರುತ್ತಿದ್ದಾರೆ.
ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದ ವೇಳೆಯಲ್ಲಿ ಹಾಸನದ ಮಿಥುನ್ ಹಾಗೂ ಶಶಾಂಕ್ ಸಮುದ್ರ ಪಾಲಾಗಿದ್ದರು ಇದಕ್ಕೆ ನುರಿತ ಲೈಫ್ ಗಾರ್ಡ್‌ಗಳ ನಿಯೋಜನೆ ಮಾಡದಿರುವುದು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಈ ಹಿಂದೆ ಇಲ್ಲಿ ಬೋಟಿಂಗ್ ವ್ಯವಸ್ಥೆ ಇತ್ತು, ಆ ಸಂದರ್ಭದಲ್ಲಿ ಸರಿ ಸುಮಾರು 50ಕ್ಕೂ ಹೆಚ್ಚು ಜನ ಈಜು ಬಲ್ಲವರು ಸಮುದ್ರ ಕಿನಾರೆಯಲ್ಲೇ ಇರುತ್ತಿದ್ದರು. ಅಹಿತಕರ ಘಟನೆಗಳು ನೆಡೆಯುವ ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನೆಡೆಸಿ ಜನರ ಪ್ರಾಣವನ್ನು ಉಳಿಸುತ್ತಾ ಇದ್ದರು. ಹಾಗಾಗಿ, ಸಾವು, ನೋವುಗಳು ಈ ಬೀಚ್ ನಲ್ಲಿ ಸಂಭವಿಸುತ್ತಿರಲಿಲ್ಲ. ಆದರೆ ಈ ಭಾರಿ ಬೋಟಿಂಗ್ ಬಂದ್ ಮಾಡಿದ್ದಾರೆ. ಅದರ ಜೊತೆ ಅಷ್ಟು ಪರಿಣಿತಿ ಹೊಂದದ ಲೈಫ್ ಗಾರ್ಡ್ ಗಳನ್ನು ನಿಯೋಜನೆ ಮಾಡಿದ್ದಾರೆ. ಈ ರೀತಿಯಾದ ಅವ್ಯವಸ್ಥೆಯೇ ಯುವಕರ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಉಡುಪಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಶಿಘ್ರ ಕೈಗೊಳ್ಳ ಬೇಕೆನ್ನುವಂತದ್ದು ಸ್ಥಳೀಯರ ಮನವಿಯಾಗಿರುತ್ತದೆ.



















