ಉಡುಪಿ: ಉಡುಪಿ ಶ್ರೀಕೃಷ್ಣ ಮಠವು ಎಲ್ಲಾ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದ್ದು, ಪರ್ಯಾಯ ಶಿರೂರು ಮಠ ಹೊರಡಿಸಿದ ಈ ನಿರ್ದೇಶನವು ಜನವರಿ 19 ಸೋಮವಾರದಿಂದ ಜಾರಿಗೆ ಬಂದಿರುತ್ತದೆ.
ಕಳೆದ ಕೆಲವು ವರ್ಷಗಳಿಂದ ಮಹಾಪೂಜೆ ನಡೆಯುವ ಅಪರಾಹ್ನದವರೆಗೆ ಜಾರಿಯಲ್ಲಿದ್ದ ವಸ್ತ್ರ ಸಂಹಿತೆಯನ್ನು ಇದೀಗ ದಿನ ಪೂರ್ತಿ ಜಾರಿಗೊಳಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಕೃಷ್ಣ ಮುಖ್ಯಪ್ರಾಣರ ದರ್ಶನಕ್ಕಾಗಿ ಮಠ ಪ್ರವೇಶಿಸುವ ಮುನ್ನ ಪುರುಷರು ಅಂಗಿಯನ್ನು ತೆಗೆಯಬೇಕಾಗಿದೆ. ಬರ್ಮುಡ, ಹಾಫ್ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ. ಶಾಲನ್ನು ಧರಿಸಿ ಮಠದೊಳಗೆ ಬರಬಹುದಾಗಿದೆ.
ಇನ್ನು ಕೃಷ್ಣ ಮಠಕ್ಕೆ ಆಗಮಿಸುವ ಮಹಿಳಾ ಭಕ್ತರೂ ಸಹ ಸಭ್ಯ ಉಡುಪುಗಳನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಟಿ ಶರ್ಟ್, ಸ್ಲೀವ್‌ಲೆಸ್ ಉಡುಪುಗಳನ್ನು ಧರಿಸಿ ಬರುವಂತಿಲ್ಲ ಎಂದು ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಇದನ್ನೂ ಓದಿ : ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ಹಿಡಿದು ಚಾಲನೆಗೆ ಟೀಕೆ | ಉಡುಪಿ ಡಿಸಿ ಸ್ವರೂಪ ಟಿ.ಕೆ ಸ್ಪಷ್ಟನೆ



















