ಕರ್ನಾಟಕದಲ್ಲಿ ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಅವ್ಯವಹಾರ ಮತ್ತು ಚರ್ಚೆಗೆ ಗ್ರಾಸವಾದ ಮಾಹಿತಿಯೊಂದು ಬಯಲಾಗಿದೆ. ಬಿಹಾರ ಮೂಲದ ಉದಯ್ ಕುಮಾರ್ ಎಂಬ ವ್ಯಕ್ತಿಗೆ ಒಂದೇ ಮಾಹಿತಿ ಹಾಗೂ ಹೆಸರಿನಲ್ಲಿ ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಮತದಾನದ ಹಕ್ಕಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಇವರು, ಬಿಹಾರದ ನಾವಡ ಜಿಲ್ಲೆಯ ಹಿಸೌ ವಿಧಾನಸಭಾ ಕ್ಷೇತ್ರದಲ್ಲೂ ಮತದಾನದ ಹಕ್ಕು ಹೊಂದಿದ್ದಾರೆ. ಬಿಹಾರದಲ್ಲಿ 2025ರಲ್ಲೇ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕರ್ನಾಟಕದ ಎಸ್ಐಆರ್ ಅಂತಿಮ ಮತಪಟ್ಟಿ ಬಿಡುಗಡೆ ಬಳಿಕವೂ ಈ ಲೋಪ ಕಾಣಿಸಿಕೊಂಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.


















