ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಮುಂದಿನ ತಿಂಗಳು ಬಿಜೆಪಿಯಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಒಂದು ತಿಂಗಳಾದ ಮೇಲೆ ವಿಜಯೇಂದ್ರ ಜಾಗಕ್ಕೇ ಗ್ಯಾರಂಟಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಮೊದಲು ತಮ್ಮ ಸ್ಥಾನ ಉಳಿಸಿಕೊಳ್ಳಲಿ ಎಂದಿರುವ ಅವರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಖರ್ಗೆಯವರ ನಾಯಕತ್ವದಲ್ಲಿ ನಾವು ಬಹಳ ನಮ್ರತೆಯಿಂದ ಬದುಕಿನ ರಾಜಕಾರಣ ಮಾಡುತ್ತಿದ್ದು, 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೀಪಾವಳಿಯಿಂದ ನರಕಾಸುರನ ಪತನದ ಕುರಿತ ಕೇಂದ್ರ ಸಚಿವ ಹೆಚ್ಡಿಕೆ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ದಸರಾ ಟೈಮ್ನಲ್ಲಿ ಅಲ್ಲೋಲ ಕಲ್ಲೋಲ ಅಂದವರು ಈಗ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷ ಎಂದು ಮುಂದೆ ತಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. ಇವಿಎಂ ಕುರಿತು ಮಾತನಾಡಿ, ಇವಿಎಂ ಸರಿ ಇಲ್ಲ ಎಂದು ಬಿಜೆಪಿಯ ಮಾಜಿ ಕೇಂದ್ರ ಮಂತ್ರಿ ರವಿವರ್ಮ ಕೂಡ ಹೇಳಿದ್ದು, ಇದರ ಬಗ್ಗೆ ಸಂಶೋಧನೆ ನಡೆಸಿ ಸರಿಪಡಿಸೋಣ ಮತ್ತು ಇಷ್ಟೊಂದು ವಿಶ್ವಾಸವಿದ್ದರೆ ತಾಲೂಕು, ಜಿಲ್ಲಾ ಪಂಚಾಯತ್ ಹಾಗೂ ಶಾಸಕರ ಚುನಾವಣೆಯನ್ನು ಬ್ಯಾಲೆಟ್ ಪೇಪರ್ನಲ್ಲಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.


















