ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡಾ ಬಳಿ ಟ್ರಾಕ್ಟರ್ ಕಾಲುವೆಗೆ ಪಲ್ಟಿಯಾಗಿದೆ. ಕಡ್ಡಿರಾಂಪುರ ತಾಂಡಾದಿಂದ ಕಬ್ಬು ಕಟಾವಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಸ್ತೆಯ ಹಂಪ್ಸ್ ದಾಟುವಾಗ ಎಂಜಿನ್ ಮತ್ತು ಟ್ರಾಲಿ ನಡುವಿನ ಕೊಂಡಿ ಕಳಚಿದೆ. ಇದರಿಂದ ಟ್ರಾಕ್ಟರ್ ಎಂಜಿನ್ ಮತ್ತು ಟ್ರಾಲಿ ಎರಡೂ ಕಾಲುವೆಗೆ ಉರುಳಿ ಬಿದ್ದಿವೆ.
ಟ್ರಾಕ್ಟರ್‌ನಲ್ಲಿದ್ದ 15ರಿಂದ 20 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















