ಬೆಂಗಳೂರು: ಎಲ್ಲೆಂದರಲ್ಲಿ ಕಸ ಸುರಿಯುವ ಮಂದಿಗೆ ನೊಂದ ಪೌರಕಾರ್ಮಿಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಾಗರಬಾವಿ ಸಮೀಪದ ಮಾಳಗಾಳ ಬಳಿ ಈ ಅಪರೂಪದ ಘಟನೆ ನಡೆದಿದೆ. ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯಲಾಗಿದೆ. ಈ ಕಸದಂತೆ ನಿಮ್ಮ ಜೀವನವೂ ಆದಷ್ಟೇ ಬೇಗನೆ ಕೊಳೆತು ಹೋಗಲಿ ಎಂದು ಉಲ್ಲೇಖಿಸಲಾಗಿದೆ.
ಬ್ಲಾಕ್ ಸ್ಪಾಟ್ನಲ್ಲಿ ನಿತ್ಯ ಕಸ ತೆರವು ಮಾಡಿ ಪೌರಕಾರ್ಮಿಕರು ಬೇಸತ್ತಿದ್ದಾರೆ. ಕಸ ಸುರಿಯುವವರಿಗೆ ಜಾಗೃತಿ ಮೂಡಿಸಲು ಪೌರಕಾರ್ಮಿಕರು ಕಠೋರ ಪದಗಳನ್ನು ಬಳಸಿದ್ದಾರೆ. ಆದರೂ ಕಸ ಸುರಿಯುವ ಕೆಲವು ಮಂದಿ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ.


















