ಬೆಂಗಳೂರು : ರಿಕ್ಕಿ ಕೇಜ್ ಮನೆಯಲ್ಲಿ ಸಂಪ್ ಮುಚ್ಚಳ ಕಳ್ಳತನ ಪ್ರಕರಣ ಸಂಭಂದಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಆರೋಪಿಯೂ ಗುಜರಿ ಕೆಲಸ ಮಾಡಿಕೊಂಡಿದ್ದನು. ಸಂಪ್ ಮುಚ್ಚಳ ಕದ್ದು 700 ರೂ ಗೆ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದನು. ಈ ಬಗ್ಗೆ ರಿಕ್ಕಿ ಜೇಜ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು ಅಂತೆಯೇ ದೂರು ಕೂಡ ನೀಡಿದ್ದರು.
ರಿಕ್ಕಿ ಕೊಟ್ಟ ದೂರಿನ ಮೇಲೆ ತನಿಖೆ ಆರಂಭಿಸಿದ ಇಂದಿರಾನಗರ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ಮುಚ್ಚಳ ವಶಕ್ಕೆ ಪಡೆದಿದ್ದಾರೆ. ಕಳ್ಳತನದಲ್ಲಿ ಬಾಗಿಯಾಗಿದ್ದ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ :ಕೊಡಗು | ತೇಗದ ಮರ ಕಡಿದು ಅಕ್ರಮ ಸಾಗಾಟ.. ಓರ್ವ ಅರೆಸ್ಟ್



















