ಬೆಂಗಳೂರು: ವಿದ್ಯಾರ್ಥಿಯೋರ್ವ ಮದ್ಯ ಸೇವಿಸಿ, ಐಷಾರಾಮಿ ಕಾರನ್ನ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ಪಾದಚಾರಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಪಾದಚಾರಿ ಸಂತೋಷ್ ದೊಡ್ಡಗೌಡರ್ (26) ಮೃತ ದುರ್ದೈವಿಯಾಗಿದ್ದಾರೆ. ಸಂತೋಷ್ ದೊಡ್ಡಗೌಡರ್ ಬೆಳಗಾವಿಯ ಬೈಲಹೊಂಗಲ ಮೂಲದವರು ಎಂದು ತಿಳಿದು ಬಂದಿದೆ. ಸಂತೋಷ್ ಬೆಂಗಳೂರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿದ ಬಳಿಕ ರಾತ್ರಿ ಫುಟ್ ಪಾತ್ನಲ್ಲಿ ಊಟ ಮಾಡಿ ನಡೆದುಕೊಂಡು ಹೋಗ್ತಿದ್ದ ಸಂತೋಷ್‌ಗೆ ಕಾರು ಡಿಕ್ಕಿಯಾಗಿದೆ. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ಅಬ್ದುಲ್ ರೆಹಮಾನ್, ನಡೆದುಕೊಂಡು ಹೋಗ್ತಿದ್ದ ಸಂತೋಷ್‌ಗೆ ಮೊದಲು ಡಿಕ್ಕಿ ಹೆಡೆದಿದ್ದು,ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಂತೋಷ್‌ಗೆ ಡಿಕ್ಕಿ ಹೊಡೆದ ಬಳಿಕ ವೇಗದಲ್ಲಿದ್ದ ಕಾರು ಇತರ ವಾಹನಗಳಿಗೂ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಪೊಲೀಸರು ಕಾರು ಚಾಲಕನನ್ನ ಬಂಧಿಸಿ ವಿಚಾರಣೆ ನಡೆಸಿದ್ದು, ಜೈಲಿಗೆ ಕಳುಹಿಸಿದೆ. ಮದ್ಯ ಸೇವನೆ ಹಿನ್ನಲೆ ರಕ್ತ ಮಾದರಿ ಪರೀಕ್ಷೆಗೆ ಕೂಡ ನಡೆಸಲಾಗಿದೆ.
ಇದನ್ನೂ ಓದಿ : ಮಹಾರಾಷ್ಟ್ರ ANTFನಿಂದ ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್..!



















