ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಪೆಗೌಡನಗರದಲ್ಲಿ ಯುವಕನ ಮೇಲೆ ಬೀದಿನಾಯಿ ದಾಳಿ ನಡೆದಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ ವೈದ್ಯರು ಕ್ಯಾರೇ ಎನ್ನುತ್ತಿಲ್ಲ.
ವೀರೇಶ್ ಎಂಬಾತ ಗಾಯಾಳು ಆಗಿದ್ದು, ರಕ್ತಸಿಕ್ತ ಸ್ಥಿತಿಯಲ್ಲಿ ಶ್ವಾನಗಳು ದಾಳಿ ಮಾಡಿದ್ದವು. ಇದನ್ನು ಕಂಡ ಸ್ಥಳೀಯರು ಹತ್ತಿರದ ಯಲಹಂಕ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಬ್ಯಾಂಡೆಜ್ ಇಲ್ಲದೆ ಟ್ರೀಟ್ಮೆಂಟೂ ಇಲ್ಲದೆ ಹಾಗೆಯೇ ವಿಶ್ರಾಂತಿ ಪಡೆಯಿರಿ ಹೇಗೂ ಯಲಹಂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಂದು ಮನೆಗೆ ವಾಪಾಸ್ ಕಳುಹಿಸಿದ್ದಾರೆ. ಇದೀಗ ವಿರೇಶ್ ಮನೆಯಲ್ಲಿಯೇ ರೆಸ್ಟ್ ಪಡೆಯುತ್ತಿದ್ದಾರೆ.
ಇದನ್ನೂಓದಿ : ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ; ರಸ್ತೆ ತಡೆದು ರೈತರ ತೀವ್ರ ಪ್ರತಿಭಟನೆ



















