ಪೊರ್ಕಿ ಸಿನಿಮಾ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ, ಸೌಥ್ ಬ್ಯೂಟಿ ಪ್ರಣೀತಾ ಸುಭಾಷ್ ಬಗ್ಗೆ ಗೊತ್ತೇ ಇದೆ.. ಇವರು ಕನ್ನಡದ ಮೇಲೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಕೆಲವೊಂದು ರಿಯಾಲಿಟಿ ಶೋ ಗಳನ್ನು ಕೂಡ ನನ್ನ ಮಾತೃಭಾಷೆ ಕನ್ನಡ ಎಂದು ಹೇಳಿಕೊಂಡಿದ್ದಾರೆ.
ಪ್ರಣೀತಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾರಂಗದಿಂದ ಸ್ವಲ್ಪ ದೂರ ಉಳಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗಷ್ಟೇ ಪ್ರಣೀತಾ ಅವರು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದರು. ಇದೀಗ ಅವರ ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಸಮಾರಂಭ ನಡೆದಿದ್ದು, ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಿದ್ದಾರೆ.
ಪ್ರಣೀತಾ ಮಗನ ನಾಮಕರಣದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಪ್ರೀತಿಯ ಶುಭಾಶಯ ತಿಳಿಸಿದರು. ವೇದಿಕೆಯಲ್ಲಿ ಪ್ರಣೀತಾ ಮಗನಿಗೆ ವಿಶ್ ಮಾಡಿದ ನಟಿ ರಮ್ಯಾ ಫೋಟೋಗೆ ಸಖತ್ ಪೋಸ್ ಕೊಟ್ಟರು. ಇನ್ನು ಸೌಥ್ ಬ್ಯೂಟಿ ಪ್ರಣೀತಾ ಅವರಿಗೆ ಇಬ್ಬರು ಮಕ್ಕಳು. ಮಗಳಿಗೆ 2 ವರ್ಷ ಆಗಿದ್ದು . ಇವತ್ತು ಮಗನಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ.



















